ADVERTISEMENT

ನಟಿ ಸಂಜನಾಗೆ ಆಪ್ತನಿಂದಲೇ ವಂಚನೆ: 4ನೇ ಎಸಿಎಂಎಂ ನ್ಯಾಯಾಲಯದಿಂದ ತನಿಖೆಗೆ ಆದೇಶ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2021, 7:16 IST
Last Updated 20 ಅಕ್ಟೋಬರ್ 2021, 7:16 IST
ರಾಹುಲ್ ತೋನ್ಸೆ ಜೊತೆ ಸಂಜನಾ ಗಲ್ರಾನಿ
ರಾಹುಲ್ ತೋನ್ಸೆ ಜೊತೆ ಸಂಜನಾ ಗಲ್ರಾನಿ   

ಬೆಂಗಳೂರು: ನಟಿ ಸಂಜನಾ ಗಲ್ರಾನಿಗೆ ಆಗಿರುವ ವಂಚನೆ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ 4ನೇ ಎಸಿಎಂಎಂ ನ್ಯಾಯಾಲಯವು ಇಂದಿರಾನಗರ ಪೊಲೀಸರಿಗೆ ಆದೇಶಿಸಿದೆ.

ತನಗೆ ಅತ್ಯಾಪ್ತನಾಗಿರುವ ರಾಹುಲ್ ತೋನ್ಸೆ ಎಂಬಾತನಿಂದ ವಂಚನೆಯಾಗಿದೆ ಎಂದು ಆರೋಪಿಸಿದ್ದ ಸಂಜನಾ, ಆತನ ವಿರುದ್ಧ ದೂರು ದಾಖಲಿಸಲು ನ್ಯಾಯಾಲಯದಲ್ಲಿ ಪಿಸಿಆರ್ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ತನಿಖೆಗೆ ಆದೇಶಿಸಿದೆ.

ಈ ಸಂಬಂಧ ಇಂದಿರಾನಗರ ಪೊಲೀಸರು ರಾಹುಲ್ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ADVERTISEMENT

'ತಾನು ಗೋವಾ ಮತ್ತು ಶ್ರೀಲಂಕಾದ ಕೊಲಂಬೊದಲ್ಲಿರುವ ಕ್ಯಾಸಿನೊಗಳಲ್ಲಿ ವ್ಯವಸ್ಥಾಪಕ ನಿರ್ದೇಶಕನಾಗಿರುವುದಾಗಿ ತಿಳಿಸಿದ್ದ ರಾಹುಲ್, ಕ್ಯಾಸಿನೊಗಳಲ್ಲಿ ಹಣ ವಿನಿಯೋಗಿಸಿದರೆ ಹೆಚ್ಚಿನ‌ ಲಾಭ ಗಳಿಸಬಹುದೆಂದು ಆಮಿಷ ಒಡ್ಡಿದ್ದ. ಆತನ ಮಾತು ನಂಬಿ ಕಳೆದ ಮೂರು ವರ್ಷಗಳಿಂದ ರಾಹುಲ್ ಸೇರಿದಂತೆ ಮೂವರ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಸುಮಾರು ₹ 45 ಲಕ್ಷ ಹಣ ಹಾಕಿದ್ದೆ' ಎಂದು ಸಂಜನಾ ತಿಳಿಸಿದ್ದಾರೆ.

'ರಾಹುಲ್ ಇದುವರೆಗೂ ಯಾವುದೇ ಲಾಭಾಂಶ ನೀಡಿಲ್ಲ.ಹಣ ಕೇಳಿದರೂ ಹಿಂದಿರುಗಿಸಿಲ್ಲ. ತಾನು ಕೊಟ್ಟ ಹಣವನ್ನು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ ಲಾಭ ಮಾಡಿಕೊಂಡಿದ್ದಾನೆ. ನನ್ನ ಘನತೆಗೆ ಧಕ್ಕೆ ತರುವಂತಹ ಆರೋಪಗಳನ್ನೂ ಮಾಡಿದ್ದಾನೆ' ಎಂದು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.