
ನಟಿ ಸಪ್ತಮಿ ಗೌಡ ಮನೆಯ 'ಸಿಂಬಾ' ಹೆಸರಿನ ಶ್ವಾನ ನಿಧನವಾಗಿದೆ. ಈ ಕುರಿತು ಸಪ್ತಮಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
(ಇನ್‌ಸ್ಟಾಗ್ರಾಮ್ ಚಿತ್ರ)
'ಸಿಂಬಾ' BEST BOY EVER.. ಏನು ಹೇಳಬೇಕೆಂದು ನನಗೆ ತಿಳಿದಿಲ್ಲ, ನನ್ನ ಸಿಂಬಾ ಗುಂಡು ಇಲ್ಲದ ಜಗತ್ತಿನಲ್ಲಿ ನಾವು ಬದುಕಬೇಕಾಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ ಎಂದು ಸಪ್ತಮಿ ಪೋಸ್ಟ್‌ನಲ್ಲಿ ಬರೆದುಕೊಂಡದ್ದಾರೆ.
ನೀನು ನನ್ನ ಜೀವನದ ಅರ್ಧಕ್ಕಿಂತ ಹೆಚ್ಚು ಭಾಗವಾಗಿದ್ದೆ. ನೀನು ನಮಗೆ ನೀಡಿದ ಎಲ್ಲಾ ನೆನಪುಗಳಿಗೆ ನನ್ನ ಧನ್ಯವಾದಗಳು. ಅವು ನಮಗೆ ತುಂಬಾ ಪ್ರಿಯವಾಗಿರುತ್ತವೆ ಎಂದು ಅವರು ಹೇಳಿದ್ದಾರೆ.
ಪ್ರೀತಿಯ ಶ್ವಾನ 'ಸಿಂಬಾ' ಜತೆ ನಟಿ ಸಪ್ತಮಿ ಗೌಡ
ಪ್ರೀತಿಯ ಶ್ವಾನ 'ಸಿಂಬಾ' ಜತೆ ನಟಿ ಸಪ್ತಮಿ ಗೌಡ
ಪ್ರೀತಿಯ ಶ್ವಾನ 'ಸಿಂಬಾ' ಜತೆ ನಟಿ ಸಪ್ತಮಿ ಗೌಡ
'ಸಿಂಬಾ'
ಪ್ರೀತಿಯ ಶ್ವಾನ 'ಸಿಂಬಾ' ಜತೆ ನಟಿ ಸಪ್ತಮಿ ಗೌಡ
'ಸಿಂಬಾ'
ಪ್ರೀತಿಯ ಶ್ವಾನ 'ಸಿಂಬಾ' ಜತೆ ನಟಿ ಸಪ್ತಮಿ ಗೌಡ
ನಾನು ನಿನ್ನ ಕಿವಿಯಲ್ಲಿ ಹಲವು ಬಾರಿ ಹೇಳಿರುವ ಎಲ್ಲಾ ವಿಷಯಗಳನ್ನು ನೆನಪಿಡು. ಮುಂದೊಂದು ದಿನ ನಿನ್ನನ್ನು ಭೇಟಿ ಮಾಡಿದಾಗ ಬಾಲ ಅಲ್ಲಾಡಿಸು, ಕಿವಿಗಳನ್ನು ನೆಟ್ಟಗೆ ಮಾಡಿಕೊಂಡು ಬಾ. ಮುಂದೊಂದು ದಿನ ನಿನಗೆ ಕೈ ತುಂಬಾ ಗೊಂಬೆ, ತಿಂಡಿ ಹಾಗೂ ಪ್ರೀತಿ ಸಿಗುವಂತೆ ನಾನು ನೋಡಿಕೊಳ್ಳುತ್ತೀನಿ ಎಂದು ಸಪ್ತಮಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.