ADVERTISEMENT

4ನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿರುವೆ: ನಟಿ ತನಿಷ್ಠಾ ಚಟರ್ಜಿ ಭಾವುಕ ಪೋಸ್ಟ್

ಪಿಟಿಐ
Published 25 ಆಗಸ್ಟ್ 2025, 7:03 IST
Last Updated 25 ಆಗಸ್ಟ್ 2025, 7:03 IST
<div class="paragraphs"><p>ತನಿಷ್ಠಾ ಚಟರ್ಜಿ</p></div>

ತನಿಷ್ಠಾ ಚಟರ್ಜಿ

   

ಇನ್‌ಸ್ಟಾಗ್ರಾಂ ಚಿತ್ರ

ನವದೆಹಲಿ: ‘ಪಾರ್ಚ್ಡ್‌’, ‘ಬ್ರಿಕ್‌ ಲೇನ್‌’ ಸೇರಿದಂತೆ ಹಿಂದಿ ಮತ್ತು ಇಂಗ್ಲಿಷ್‌ನ ಹಲವು ಸಿನಿಮಾಗಳಲ್ಲಿ ನಟಿಸಿರುವ ತನಿಷ್ಠಾ ಚಟರ್ಜಿ ಅವರು 4ನೇ ಹಂತದ ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ADVERTISEMENT

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಭಾವನಾತ್ಮಕ ಪೋಸ್ಟ್‌ ಹಂಚಿಕೊಂಡಿರುವ 44 ವರ್ಷದ ನಟಿ, ‘ನನ್ನ ತಂದೆಯನ್ನು ಕ್ಯಾನ್ಸರ್‌ನಿಂದ ಕಳೆದುಕೊಂಡಿದ್ದು ಸಾಲದು ಎಂಬಂತೆ, 8 ತಿಂಗಳ ಹಿಂದೆ ನನಗೆ ಆಲಿಗೋ ಮೆಟಾಸ್ಟಾಟಿಕ್ ಕ್ಯಾನ್ಸರ್ (4ನೇ ಹಂತದ ಕ್ಯಾನ್ಸರ್) ಇರುವುದು ಪತ್ತೆಯಾಯಿತು. ಇದಕ್ಕಿಂತ ಕೆಟ್ಟದ್ದು ಇನ್ನೊಂದಿಲ್ಲ. 70 ವರ್ಷದ ತಾಯಿ ಮತ್ತು 9 ವರ್ಷದ ಮಗಳು .. ಇಬ್ಬರೂ ನನ್ನ ಮೇಲೆ ಅವಲಂಬಿತರಾಗಿದ್ದಾರೆ. ಅತ್ಯಂತ ಕೆಟ್ಟ ದಿನಗಳಲ್ಲಿ ಅವರಿಂದ ಸಾಕಷ್ಟು ಪ್ರೀತಿ ಪಡೆದಿದ್ದೇನೆ. ಸ್ನೇಹಿತರು, ಕುಟುಂಬದವರ ಪ್ರೀತಿ ಇಂತಹ ಕಠಿಣ ಸ್ಥಿತಿಯಲ್ಲಿಯೂ ನನ್ನ ಮುಖದ ಮೇಲೆ ನಗು ಇರುವಂತೆ ಮಾಡಿದೆ’ ಎಂದು ಬರೆದುಕೊಂಡಿದ್ದಾರೆ. 

ತನಿಷ್ಠಾ ಅವರು ವಿದ್ಯಾ ಬಾಲನ್, ದಿಯಾ ಮಿರ್ಜಾ, ಶಬಾನಾ ಅಜ್ಮಿ, ಸೇರಿದಂತೆ ಹಲವರೊಂದಿಗೆ ಕಳೆದ ಸುಂದರ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇವರುಗಳ ಸಹಾನುಭೂತಿ, ಸಂದೇಶಗಳು ಜೀವನ ಪ್ರೀತಿಯನ್ನು ಉಳಿಸಿದೆ. ಈ ಸ್ನೇಹಕ್ಕೆ ಕೃತಜ್ಞನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಪಾರ್ಚ್ಡ್, ಬ್ರಿಕ್‌ ಲೇನ್, ಸ್ವರಾಜ್‌, ಐಸ್‌ಲ್ಯಾಂಡ್‌ ಸಿಟಿ, ದಿ ಸ್ಟೋರಿ ಟೆಲ್ಲರ್, ಸನ್‌ರೈಸ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ತನಿಷ್ಠಾ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.