ADVERTISEMENT

ಇದೇ ಮೊದಲ ಬಾರಿಗೆ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ನಟಿ ತ್ರಿಷಾ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 6:55 IST
Last Updated 30 ಜುಲೈ 2020, 6:55 IST
ತ್ರಿಷಾ ಕೃಷ್ಣನ್‌
ತ್ರಿಷಾ ಕೃಷ್ಣನ್‌   

ಕಾಲಿವುಡ್‌ ನಟಿ ತ್ರಿಷಾ ಕೃಷ್ಣನ್‌ ತಮ್ಮ ವೃತ್ತಿ ಬದುಕಿನಲ್ಲಿ ಮೊದಲ ಬಾರಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ತಮ್ಮ ಮುಂದಿನ ಚಿತ್ರಕ್ಕೆ ಖಾಕಿ ಧರಿಸಿರುವ ಖಡಕ್ ಪೊಲೀಸ್ ಅಧಿಕಾರಿ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ ಈ ಬೆಡಗಿ.

ತ್ರಿಷಾ ಕಳೆದ 17 ವರ್ಷಗಳಿಂದ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೇ ಈಗಲೂ ಟಾಪ್ ಹೀರೊಯಿನ್‌ಗಳ ಪಟ್ಟಿಯಲ್ಲಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲಿ ಹೆಚ್ಚು ನಟಿಸಿರುವ ಈಕೆ ಚಿರಂಜೀವಿಯಿಂದ ರಜನಿಕಾಂತ್‌ವರೆಗೆ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ. ‘96’ ಸಿನಿಮಾ ಬಿಡುಗಡೆಗೂ ಮೊದಲು ಇವರ ವೃತ್ತಿ ಬದುಕು ಕೊನೆಗೊಳ್ಳುವ ಹಾದಿಯಲ್ಲಿತ್ತು. ಆದರೆ ಅದ್ಭುತ ಪ್ರೇಮಕಥೆ ಹೊಂದಿದ್ದ 96 ಸಿನಿಮಾ ಸೂಪರ್ ಹಿಟ್‌ ಆಗಿತ್ತು. ಅಲ್ಲದೇ ಅದರಿಂದ ತ್ರಿಷಾ ವೃತ್ತಿ ಬದುಕು ಯು ಟರ್ನ್ ಪಡೆದುಕೊಂಡಿತ್ತು.

ಈಗ ಆಕೆ ಅರ್ಧ ಡಜನ್‌ಗೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅವರ ವೃತ್ತಿಬದುಕು ಮತ್ತೆ ಏರಿಕೆಯತ್ತ ಸಾಗುತ್ತಿದೆ. ಇಲ್ಲಿಯವರೆಗೆ ತ್ರಿಷಾ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿಲ್ಲ. ‘ಕುತ್ರಾ ಪಿರಿಪು’ ಸಿನಿಮಾದಲ್ಲಿ ತ್ರಿಷಾ ಮೊದಲ ಬಾರಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ADVERTISEMENT

ನಟಿ ವಿಜಯಶಾಂತಿ, ರಾಧ, ಸ್ನೇಹ ಸೇರಿದಂತೆ ಅನೇಕ ನಟಿಯರು ಪೊಲೀಸ್ ಪಾತ್ರದ ಮೂಲಕ ಜನಮನ್ನಣೆ ಗಳಿಸಿದ್ದರು. ಈಗ ತ್ರಿಷಾ ಪೊಲೀಸ್ ಪಾತ್ರದ ಮೂಲಕ ಜನರಿಗೆ ಇಷ್ಟವಾಗುತ್ತಾರಾ? ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.