
ಹಿಮಾಲಯ ಪ್ರವಾಸದಲ್ಲಿ ನಟ ಶಿಶಿರ್, ಐಶ್ವರ್ಯ ಸಿಂಧೋಗಿ
ಕೃಪೆ: ಇನ್‌ಸ್ಟಾಗ್ರಾಂ
ಬಿಗ್‌ಬಾಸ್ 11ನೇ ಅವೃತ್ತಿಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದ ನಟಿ ಐಶ್ವರ್ಯ ಸಿಂಧೋಗಿ ಅವರು ಶಿಶಿರ್ ಶಾಸ್ತ್ರಿ ಜತೆ ಪ್ರವಾಸ ಕೈಗೊಂಡಿದ್ದಾರೆ.
ಪ್ರವಾಸದಲ್ಲಿ ಕಳೆದ ಕ್ಷಣಗಳನ್ನು ಇವರಿಬ್ಬರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಪ್ರವಾಸದಲ್ಲಿ, ಇಬ್ಬರು ಹಿಮಾಲಯದಲ್ಲಿ ಕುದರೆ ಸವಾರಿ, ಜಿಪ್ ಲೈನಿಂಗ್ ಮಾಡಿದ್ದಾರೆ. ಹಿಮ ಮಳೆಯನ್ನು ಆನಂದಿಸಿ, ಹತ್ತಿರದ ಶಿವನ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಈ ಬಗ್ಗೆ ವಿಡಿಯೊವನ್ನು ಹಂಚಿಕೊಂಡಿದ್ದಾರೆ.
ನಟಿ ಐಶ್ವರ್ಯ, ಶಿಶಿರ್
‘ಹಿಮಾಲಯದ ಪ್ರವಾಸದ ಕ್ಷಣಗಳನ್ನು ಹಂಚಿಕೊಂಡ ಐಶ್ವರ್ಯ ಅವರು, ‘ಎಲ್ಲಿಹುದು ನಿನ್ನ ನೆಲೆ.. ಹೇಗಿಹುದು ನಿನ್ನ ಬದುಕು..ಅರಿತಿರುವೆಯಾ ನೀ ಮನುಜ..ಯಾರ ಮಡಿಲಲ್ಲಿ ಹುಟ್ಟಿ.. ಯಾರ ಋಣದ ಅನ್ನ ತಿಂದು.. ಯಾವ ಜೀವಕ್ಕೆ ನೆರಳಾಗುವೆಯೋ.. ತಿಳಿದವರಾರು’ ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ. ಆದರೆ ಯಾವ ಜಾಗಕ್ಕೆ ಭೇಟಿ ನೀಡಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ.
ಐಶ್ವರ್ಯ ಅವರು ಇನ್ನೊಂದು ಪೋಸ್ಟ್ ಕೂಡ ಹಂಚಿಕೊಂಡಿದ್ದು, ಶ್ರೀಲಂಕಾದಲ್ಲಿ ಕಳೆದ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ. ಜತೆಗೆ ಒಂದಷ್ಟು ಫೋಟೊಗಳನ್ನೂ ಶೇರ್ ಮಾಡಿದ್ದಾರೆ.
ಶ್ರೀಲಂಕಾದಲ್ಲಿ ಪ್ರವಾಸದಲ್ಲಿ ನಟಿ ಐಶ್ವರ್ಯ ಸಿಂಧೋಗಿ
ಇವರಿಬ್ಬರು ಹಂಚಿಕೊಂಡಿರುವ ಮತ್ತೊಂದು ವಿಡಿಯೊದಲ್ಲಿ , ‘ಸ್ನೇಹಿತರ ಜೊತೆ ಚಾರಣಕ್ಕೆ ಹೋಗಿದ್ದು, ಅಲ್ಲಿನ ಗುಡ್ಡಗಾಡು ಪ್ರದೇಶಗಳನ್ನು ಸುತ್ತಿ, ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಆನಂದಿಸಿದ್ದಾರೆ.
ಸದ್ಯ, ಶಿಶಿರ್ ಅವರು ‘ಗಂಧದಗುಡಿ‘ ಎಂಬ ಧಾರಾವಾಹಿಯಲ್ಲಿ ಮುತ್ತುರಾಜ್ ಪಾತ್ರದಲ್ಲಿ ನಟಿಸುತ್ತಿದ್ದು, ಐಶ್ವರ್ಯ ಅವರು ‘ನಾನು ನಿನ್ನ ಬಿಡಲಾರೆ’ ಸೀರಿಯಲ್‌ನಲ್ಲಿ ಶರತ್ ಗೆಳತಿಯಾಗಿ ಆಗಮಿಸಿದ್ದಾರೆ.
ಐಶ್ವರ್ಯ ಅವರು ‘ಮಲೆನಾಡಿನ ಹೂ ನೀ’ ಎಂಬ ಆಲ್ಬಮ್ ಸಾಂಗ್‌ನಲ್ಲಿಯೂ ಕಾಣಿಸಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.