
ಪಿಟಿಐ
ಅಜಯ್ ದೇವಗನ್ ಮತ್ತು ರಕುಲ್ ಪ್ರೀತ್ ಸಿಂಗ್ ನಟನೆಯ 'ದೇ ದೇ ಪ್ಯಾರ್ ದೇ -2' ಚಿತ್ರವು ಗಲ್ಲಾ ಪೆಟ್ಟಿಗೆಯಲ್ಲಿ ₹100 ಕೋಟಿ ಗಳಿಸಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಅನ್ಸುಲ್ ಶರ್ಮಾ ಹಾಗೂ ಸಹ ನಿರ್ದೇಶಕ ಅಂಕುರ್ ಗರ್ಗ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದು, ಲವ್ ಫಿಲ್ಡ್ ಹಾಗೂ ಭೂಷಣ್ ಕುಮಾರ್ ಅವರ ಟಿ-ಸಿರೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿದೆ.
2019ರಲ್ಲಿ ತೆರೆಕಂಡ 'ದೇ ದೇ ಪ್ಯಾರ್ ದೇ' ಚಿತ್ರದ ಮುಂದುವರಿದ ಭಾಗ 'ದೇ ದೇ ಪ್ಯಾರ್ ದೇ 2 ಚಿತ್ರವು ನವೆಂಬರ್ 14ಕ್ಕೆ ತೆರೆ ಕಂಡಿತ್ತು.
50 ವರ್ಷದ ಶ್ರೀಮಂತ ವ್ಯಕ್ತಿ ಆಶಿಶ್ ಪಾತ್ರದಲ್ಲಿ ಅಜಯ್ ದೇವ್‌ಗನ್ ನಟಿಸಿದ್ದರೆ, ಆಯೇಷಾ ಪಾತ್ರದಲ್ಲಿ ನಟಿ ಪ್ರೀತ್ ಸಿಂಗ್ ಕಾಣಿಸಿಕೊಂಡಿದ್ದಾರೆ.