ಚಿತ್ರ ಕೃಪೆ: @KomalNahta
ನವದೆಹಲಿ: ಚಿತ್ರದ ಸೀಕ್ವೇಲ್‌ನಲ್ಲಿ ನಟಿಸಲು ಯಾವುದೇ ಅಭ್ಯಂತರವಿಲ್ಲ. ಏಕೆಂದರೆ ಸಿನಿಮಾದ ಸ್ಕ್ರಿಪ್ಟ್ ಒಂದು ಪಾತ್ರವನ್ನು ಮತ್ತೆ ನೋಡಲು ಬಯಸುತ್ತದೆ ಎಂದು ಬಾಲಿವುಡ್ ನಟ ಅಜಯ್ ದೇವಗನ್ ಹೇಳಿದ್ದಾರೆ.
ಈ ವರ್ಷದಲ್ಲಿ ಅಜಯ್ ದೇವಗನ್ ತಮ್ಮ ಹಿಂದಿನ ಹಿಟ್ ಚಿತ್ರಗಳಾದ ‘ರೈಡ್ 2’, ‘ಸನ್ ಆಫ್ ಸರ್ದಾರ್–2’ ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಇದೀಗ ‘ದೇ ದೇ ಪ್ಯಾರ್ ದೇ 2’ ಸೀಕ್ವೆಲ್‌ನಲ್ಲಿ ನಟಿಸಿದ್ದಾರೆ. ಈ ಚಿತ್ರವು 14ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ.
ನಿರ್ಮಾಪಕ ಲವ್ ರಂಜನ್ ಜತೆ ಕೆಲಸ ಮಾಡಲು ಇಷ್ಟವಾಗುತ್ತೆ ಎಂದು ಕೂಡ ಇದೇ ಸಂದರ್ಭದಲ್ಲಿ ನಟ ಅಜಯ್ ದೇವಗನ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಜಯ್ ದೇವಗನ್, ಬೇರೆ ರೀತಿಯ ಸ್ಕ್ರಿಪ್ಟ್ ಇದ್ದಾಗ ನನಗೆ ಸೀಕ್ವೆಲ್‌ಗಳು ಇಷ್ಟವಾಗುವುದಿಲ್ಲ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.