ADVERTISEMENT

ಬಾಲಯ್ಯ ಅಭಿಮಾನಿಗಳಿಗೆ ಶುಭ ಸುದ್ದಿ; ‘ಅಖಂಡ 2’ ಬಿಡುಗಡೆ ದಿನಾಂಕ ಘೋಷಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಡಿಸೆಂಬರ್ 2025, 6:15 IST
Last Updated 10 ಡಿಸೆಂಬರ್ 2025, 6:15 IST
<div class="paragraphs"><p>ನಟ ನಂದಮೂರಿ ಬಾಲಕೃಷ್ಣ</p></div>

ನಟ ನಂದಮೂರಿ ಬಾಲಕೃಷ್ಣ

   

ನಟ ನಂದಮೂರಿ ಬಾಲಕೃಷ್ಣ ಅಭಿಮಾನಿಗಳಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಕಾರಣಾಂತರಗಳಿಂದ ಮುಂದೂಡಿದ್ದ ಬಾಲಯ್ಯ ಅಭಿನಯದ ‘ಅಖಂಡ 2’ ಸಿನಿಮಾ ಬಿಡುಗಡೆ ದಿನಾಂಕ ನಿಗದಿಪಡಿಸಲಾಗಿದೆ.

ಸದ್ಯ, ‘ಅಖಂಡ 2’ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗಿದೆ. ಡಿಸೆಂಬರ್ 12ರಂದು ಚಿತ್ರಮಂದಿರಗಳಲ್ಲಿ ಅಖಂಡ 2 ಸಿನಿಮಾ ಪ್ರದರ್ಶನ ಕಾಣಲಿದೆ ಎಂದು ನಿರ್ಮಾಣ ಸಂಸ್ಥೆ 14 ರೀಲ್ಸ್ ಪ್ಲಸ್ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದೆ.

ನಟ ನಂದಮೂರಿ ಬಾಲಕೃಷ್ಣ ಅಭಿನಯದ ಈ ಸಿನಿಮಾ 2021ರಲ್ಲಿ ತೆರೆಕಂಡ ಅಖಂಡ ಸಿನಿಮಾದ ಸೀಕ್ವೆಲ್‌. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಕಾಣಲಿದೆ. ಬೊಯಪಾಟಿ ಶ್ರೀನು ಹಾಗೂ ಬಾಲಕೃಷ್ಣ ಕಾಂಬಿನೇಷನ್‌ನ 4ನೇ ಸಿನಿಮಾ ಇದಾಗಿದೆ.

14 ರೀಲ್ಸ್ ಪ್ಲಸ್ ಬ್ಯಾನರ್ ಅಡಿಯಲ್ಲಿ ರಾಮ್ ಅಚಂತ ಮತ್ತು ಗೋಪಿಚಂದ್ ಅಚಂತ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.  ಸಿನಿಮಾಗೆ ಎಸ್. ಥಮನ್ ಸಂಗೀತ ನಿರ್ದೇಶನ, ಸಿ.ರಾಮಪ್ರಸಾದ್, ಸಂತೋಷ್ ಡಿ.ಡೆಟಕೆ ಛಾಯಾಚಿತ್ರಗ್ರಹಣ, ಎ.ಎಸ್ ಪ್ರಕಾಶ್ ಕಲಾ ನಿರ್ದೇಶನ, ತಮ್ಮಿರಾಜು ಸಂಕಲನ, ರಾಮ್-ಲಕ್ಷ್ಮಣ್‌ ಸಾಹಸ ನಿರ್ದೇಶನವಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.