ನಟ ನಂದಮೂರಿ ಬಾಲಕೃಷ್ಣ
ಚಿತ್ರ: ಎಕ್ಸ್ ಖಾತೆ
ನಟ ತಾರಾ ನಟ ನಂದಮೂರಿ ಬಾಲಕೃಷ್ಣ ಅಭಿನಯದ ‘ಅಖಂಡ 2’ ಸಿನಿಮಾ ಇಂದು (ಡಿಸೆಂಬರ್ 12) ಬಿಡುಗಡೆಯಾಗಿದೆ. ಬಹುನಿರೀಕ್ಷಿತ ಸಿನಿಮಾಗಾಗಿ ಕಾದು ಕುಳಿತಿದ್ದ ಬಾಲಕೃಷ್ಣ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಬೆಂಗಳೂರು ಸೇರಿದಂತೆ ಹಲವು ದೇಶದಾದ್ಯಂತ ಡಿಸೆಂಬರ್ 11ರ ರಾತ್ರಿ ಸಿನಿಮಾದ ಪ್ರೀಮಿಯರ್ ಶೋ ನಡೆದಿದೆ. ಈ ಸಿನಿಮಾದಲ್ಲಿ ಬಾಲಯ್ಯ ಅವರು ಉಗ್ರನಾಗಾ ಸಾಧುವಿನ ಪಾತ್ರದಲ್ಲಿ ಕಾಣಿಸಿಕೊಂಡು ತೆರೆ ಮೇಲೆ ಅಬ್ಬರಿಸಿದ್ದಾರೆ. ಈ ಸಿನಿಮಾದಲ್ಲಿ ಬಾಲಯ್ಯ ಅವರ ನಟನೆ ಕಂಡು ಪ್ರೇಕ್ಷಕರು ಸಂಭ್ರಮಿಸುತ್ತಿದ್ದಾರೆ.
ಈ ಸಿನಿಮಾ ನೋಡಿದ ಪ್ರೇಕ್ಷಕರು ಸಾಮಾಜಿಕ ಮಾಧ್ಯಮ ಹಾಗೂ ಬುಕ್ ಮೈ ಶೋ ಅಪ್ಲಿಕೇಶನ್‌ನಲ್ಲಿ ತಮ್ಮ ವಿಮರ್ಶೆಗಳನ್ನು ನೀಡುತ್ತಿದ್ದಾರೆ.
ಇನ್ನು ನಟ ನಂದಮೂರಿ ಬಾಲಕೃಷ್ಣ ಅಭಿನಯದ ಈ ಸಿನಿಮಾ 2021ರಲ್ಲಿ ತೆರೆಕಂಡ ಅಖಂಡ ಸಿನಿಮಾದ ಸೀಕ್ವೆಲ್. ಬೊಯಪಾಟಿ ಶ್ರೀನು ಹಾಗೂ ಬಾಲಕೃಷ್ಣ ಕಾಂಬಿನೇಷನ್‌ನ 4ನೇ ಸಿನಿಮಾ ಇದಾಗಿದ್ದು, 14 ರೀಲ್ಸ್ ಪ್ಲಸ್ ಬ್ಯಾನರ್ ಅಡಿಯಲ್ಲಿ ರಾಮ್ ಅಚಂತ ಮತ್ತು ಗೋಪಿಚಂದ್ ಅಚಂತ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾಗೆ ಎಸ್. ಥಮನ್ ಸಂಗೀತ ನಿರ್ದೇಶನ, ಸಿ.ರಾಮಪ್ರಸಾದ್, ಸಂತೋಷ್ ಡಿ.ಡೆಟಕೆ ಛಾಯಾಚಿತ್ರಗ್ರಹಣ, ಎ.ಎಸ್ ಪ್ರಕಾಶ್ ಕಲಾ ನಿರ್ದೇಶನ, ತಮ್ಮಿರಾಜು ಸಂಕಲನ, ರಾಮ್-ಲಕ್ಷ್ಮಣ್ ಸಾಹಸ ನಿರ್ದೇಶನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.