ADVERTISEMENT

ಸೀತಾ ನಿರೀಕ್ಷೆಯಲ್ಲಿ ರಾಮ್‌ ಚರಣ್‌

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2019, 19:30 IST
Last Updated 27 ನವೆಂಬರ್ 2019, 19:30 IST
   

ಖ್ಯಾತ ನಿರ್ದೇಶಕ ಎಸ್‌. ಎಸ್‌ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌’ ಸಿನಿಮಾಗಾಗಿ ಅಭಿಮಾನಿಗಳು ನಿರೀಕ್ಷಿಸುತ್ತಿದ್ದು, ಕಳೆದೊಂದು ವರ್ಷದಿಂದ ಬಾಲಿವುಡ್‌ನ ಅಲಿಯಾ ಭಟ್‌ ಹಾಗೂ ಅಜಯ್‌ ದೇವ್‌ಗನ್‌ ಚಿತ್ರೀಕರಣಕ್ಕೆ ಬಂದಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಈ ಸಿನಿಮಾದಲ್ಲಿ ರಾಮ್‌ ಚರಣ್‌ ಅಲ್ಲೂರಿ ಸೀತಾರಾಮ ರಾಜು ಪಾತ್ರದಲ್ಲಿ ನಟಿಸಲಿದ್ದು ಅಲಿಯಾ ಭಟ್‌ ಸೀತಾ ಆಗಿ ಜೊತೆಯಾಗಲಿದ್ದಾರೆ. ಈಗಾಗಲೇ ವಿದೇಶಿಯರ ತಾರಾಗಣದೊಂದಿಗೆ ಕೆಲವು ದೃಶ್ಯಗಳನ್ನು ಚಿತ್ರೀಕರಿಸ ಲಾಗಿದೆ. ಇಲ್ಲಿಯವರೆಗೆ ಒಂದು ದಿನದ ಚಿತ್ರೀಕರಣಕ್ಕೂ ಅಲಿಯಾ ಹಾಜರಾಗಿಲ್ಲ. ಪ್ರಮುಖ ಪಾತ್ರವೊಂದಕ್ಕೆ ಸಹಿ ಹಾಕಿರುವ ಅಜಯ್‌ ದೇವ್‌ಗನ್‌ ಕೂಡ ಸೆಟ್‌ಗೆ ಕಾಲಿಟ್ಟಿಲ್ಲ.

ಆರ್‌ಆರ್‌ಆರ್‌ ಚಿತ್ರವು 2020 ರಲ್ಲಿ ಬಿಡುಗಡೆಯಾಗಲಿದೆ ಎಂದು ಘೋಷಣೆಯಾಗಿದ್ದು ಅಲಿಯಾ ಹಾಗೂ ಅಜಯ್ ತಮ್ಮ ಪಾತ್ರಕ್ಕಾಗಿ ದಿನಾಂಕವನ್ನು ಕೂಡ ಸ್ಟಷ್ಟವಾಗಿ ತಿಳಿಸಿಲ್ಲ. ‌‌‌ಈ ಇಬ್ಬರ ಪಾತ್ರದ ಚಿತ್ರೀಕರಣವನ್ನು ಬೇಗನೆ ಮುಗಿಸುವ ಸಲವಾಗಿ ನಿರ್ದೇಶಕ ಅವರ ಪಾತ್ರದ ಕೆಲ ಸನ್ನಿವೇಶಗಳಿಗೆ ಕತ್ತರಿ ಹಾಕಿದ್ದಾರಂತೆ. ಈ ಬಗ್ಗೆ ಚಿತ್ರ ತಂಡ ಯಾವುದೇ ಸ್ಟಷ್ಟ ಮಾಹಿತಿ ನೀಡುತ್ತಿಲ್ಲ. ಆದರೆ, ರಾಮ್‌ ಚರಣ್‌ ಹಾಗೂ ಅಲಿಯಾಗಾಗಿ ಹಾಡುಗಳ ಚಿತ್ರೀಕರಣದ ತಯಾರಿಯಲ್ಲಿ ರಾಜಮೌಳಿ ಇದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.