ಬೆಂಗಳೂರು: ಬಾಲಿವುಡ್ ತಾರಾ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಆಲಿಯಾ ಭಟ್ ಅವರು ಭಾನುವಾರ ಬೆಳಗ್ಗೆ 7.30ಕ್ಕೆ ಮುಂಬೈನ ಎಚ್.ಎನ್. ರಿಲಯನ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಲಿಯಾ ಅವರಿಗೆ ಭಾನುವಾರವೇ ಹೆರಿಗೆಯಾಗುವ ನಿರೀಕ್ಷೆಯಿದೆ. ರಣಬೀರ್–ಆಲಿಯಾ ದಂಪತಿಯ ಜತೆಗೆ ನೀತು ಕಪೂರ್, ಸೋನಿ ರಾಜಾನ್ ಮತ್ತು ಶಾಹೀನ್ ಭಟ್ ಕೂಡ ಆಸ್ಪತ್ರೆಗೆ ತೆರಳಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ ಆಲಿಯಾ ಮತ್ತು ರಣಬೀರ್ ಕಪೂರ್ ಮದುವೆಯಾಗಿದ್ದಾರೆ. ಇತ್ತೀಚೆಗೆ ತಾವು ಗರ್ಭಿಣಿಯಾಗಿರುವುದಾಗಿ ಆಲಿಯಾ ಭಟ್ ಘೋಷಿಸಿದ್ದರು.
ಆಲಿಯಾ–ರಣಬೀರ್ ಮಗುವಿನ ನಿರೀಕ್ಷೆಯಲ್ಲಿರುವಂತೆಯೇ ಬಾಲಿವುಡ್‌ನಲ್ಲೂ ಸಂಭ್ರಮ ಮನೆಮಾಡಿದ್ದು, ಕುಟುಂಬದ ಆಪ್ತರು ಮತ್ತು ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಶುಭಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.