
ಅಲಿಯಾ–ರಣಬೀರ್ ಹೊಸ ಮನೆ ಪ್ರವೇಶಿಸಿದ ಕ್ಷಣ
ಮುಂಬೈ: ಕಳೆದ ತಿಂಗಳು ತಮ್ಮ ಕನಸಿನ ಮನೆಗೆ ಪ್ರವೇಶಿಸಿರುವ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ದಂಪತಿ, ಗೃಹ ಪ್ರವೇಶದ ಕ್ಷಣಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
ಮುಂಬೈನ ಪಾಲಿ ಹಿಲ್ಸ್‌ನಲ್ಲಿ ಸುಮಾರು ₹250 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ 6 ಅಂತಸ್ತಿನ ಮನೆಗೆ ನವೆಂಬರ್ 6ರಂದು ಮಗಳು ರಾಹಾ ಕಪೂರ್ ಹುಟ್ಟಿದ ದಿನ ಗೃಹ ಪ್ರವೇಶ ಮಾಡಿದ್ದರು. ಕಪೂರ್ ಕುಟುಂಬದ ಹಿಂದಿನ ಮನೆ ಕೃಷ್ಣ ರಾಜ್ ಬಂಗಲೆಯಿದ್ದ ಸ್ಥಳದಲ್ಲಿಯೇ ಈ ಮನೆಯನ್ನು ನಿರ್ಮಿಸಲಾಗಿದೆ.
ಗೃಹಪ್ರವೇಶದ ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಅಲಿಯಾ, ‘ನವೆಂಬರ್ 2025... ನಿನಗೆ ಒಂದೂವರೆ ತಿಂಗಳು’ ಎಂದು ಬರೆದುಕೊಂಡಿದ್ದಾರೆ.
ಗೃಹ ಪ್ರವೇಶದ ದಿನ ಅಲಿಯಾ ಅವರು ಚಿನ್ನದ ಬಣ್ಣದ ಬಾರ್ಡರ್ ಹೊಂದಿರುವ ತೆಳು ಗುಲಾಬಿ ಬಣ್ಣದ ಸೀರೆಯಲ್ಲಿ ಆಕರ್ಷಕವಾಗಿ ಕಾಣಿಸಿಕೊಂಡರೆ, ರಣಬೀರ್ ಅವರು ಬಿಳಿ ಬಣ್ಣದ ಕುರ್ತಾದಲ್ಲಿ ಸರಳವಾಗಿ ಕಾಣಿಸಿಕೊಂಡಿದ್ದಾರೆ.
ತಂದೆ ರಿಷಿ ಕಪೂರ್ ಅವರ ದೊಡ್ಡ ಫೋಟೊವನ್ನು ಮನೆಯಲ್ಲಿ ಹಾಕಿರುವುದು ವಿಶೇಷವಾಗಿದೆ.
ರಾಹಾ ಹುಟ್ಟುಹಬ್ಬ ಆಚರಣೆ:
ನವೆಂಬರ್ 6ರಂದು ರಾಹಾ ಕಪೂರ್‌ಗೆ ಮೂರು ವರ್ಷ ತುಂಬಿದ್ದು, ಗೃಹ ಪ್ರವೇಶದ ಸಮಯದಲ್ಲಿ ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ. ಹುಟ್ಟುಹಬ್ಬದ ಸಮಾರಂಭದ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.