ADVERTISEMENT

‘ತಾಂಡವ್‌’: ಬದಲಾವಣೆಗೆ ಮುಂದಾದ ನಿರ್ದೇಶಕರು

ಏಜೆನ್ಸೀಸ್
Published 20 ಜನವರಿ 2021, 6:31 IST
Last Updated 20 ಜನವರಿ 2021, 6:31 IST
‘ತಾಂಡವ್‌’ ಚಿತ್ರದ ವಿರುದ್ಧ ಮುಂಬೈನಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದ ಬಿಜೆಪಿ ಕಾರ್ಯಕರ್ತರು  ಎಎಫ್‌ಪಿ ಚಿತ್ರ
‘ತಾಂಡವ್‌’ ಚಿತ್ರದ ವಿರುದ್ಧ ಮುಂಬೈನಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದ ಬಿಜೆಪಿ ಕಾರ್ಯಕರ್ತರು  ಎಎಫ್‌ಪಿ ಚಿತ್ರ   

ಮುಂಬೈ: ‘ತಾಂಡವ್‌’ ವೆಬ್‌ ಸರಣಿ ಚಿತ್ರದಲ್ಲಿ ಬದಲಾವಣೆಗಳನ್ನು ಮಾಡಲು ಅಮೆಜಾನ್‌ ಪ್ರೈಮ್‌ ಒಪ್ಪಿಕೊಂಡಿದೆ.

ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಹಾಗೂ ಹಿಂದೂ ದೇವತೆಗಳನ್ನು ಅವಮಾನ ಮಾಡಲಾಗಿದೆ ಎಂದು ಹಲವು ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಚಿತ್ರದ ನಿರ್ಮಾಪಕರ ವಿರುದ್ಧ ಎಫ್‌ಐಆರ್‌ ಸಹ ದಾಖಲಿಸಲಾಗಿತ್ತು. ಬಳಿಕ, ಚಿತ್ರ ತಂಡ ಕ್ಷಮೆಯಾಚಿಸಿತ್ತು.

‘ತಾಂಡವ್‌ ವೆಬ್‌ ಸರಣಿ ಚಿತ್ರದಲ್ಲಿ ಬದಲಾವಣೆ ಮಾಡಲು ನಿರ್ಧರಿಸಲಾಗಿದೆ’ ಎಂದು ನಿರ್ದೇಶಕ ಅಲಿ ಅಬ್ಬಾಸ್‌ ಝಾಫರ್‌ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ತಾಂಡವ್‌ ಒಂದು ಕಾಲ್ಪನಿಕ ಚಿತ್ರ. ಇಲ್ಲಿನ ಪಾತ್ರಗಳು ಯಾವುದಾದರೂ ಸನ್ನಿವೇಶಕ್ಕೆ ಅಥವಾ ವ್ಯಕ್ತಿಗೆ ಹೋಲಿಕೆಯಾಗಿದ್ದರೆ ಅದೊಂದು ಆಕಸ್ಮಿಕ’ ಎಂದು ಹೇಳಿದ್ದಾರೆ.

ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಈ ಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.