ADVERTISEMENT

₹31 ಕೋಟಿಗೆ ಖರೀದಿಸಿ ₹83 ಕೋಟಿಗೆ ಅಪಾರ್ಟ್‌ಮೆಂಟ್ ಮಾರಾಟ ಮಾಡಿದ ಅಮಿತಾಬ್ ಬಚ್ಚನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಜನವರಿ 2025, 9:21 IST
Last Updated 21 ಜನವರಿ 2025, 9:21 IST
ಅಮಿತಾಬ್ ಬಚ್ಚನ್‌
ಅಮಿತಾಬ್ ಬಚ್ಚನ್‌   

ಮುಂಬೈ: ಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಅವರು ಮುಂಬೈನ ಓಶಿವಾರಾದಲ್ಲಿರುವ ಡುಪ್ಲೆಕ್ಸ್‌ ಅಪಾರ್ಟ್‌ಮೆಂಟ್‌ ಅನ್ನು ₹83 ಕೋಟಿಗೆ ಮಾರಾಟ ಮಾಡಿದ್ದಾರೆ ಎಂದು ವರದಿಯಾಗಿದೆ.

ಓಶಿವಾರಾದಲ್ಲಿರುವ ಕ್ರಿಸ್ಟಲ್ ಗ್ರೂಪ್‌ನ ವಸತಿ ಸಮುಚ್ಚಯವಾದ ‘ದಿ ಅಟ್ಲಾಂಟಿಸ್‌’ನಲ್ಲಿ ಈ ಅಪಾರ್ಟ್‌ಮೆಂಟ್‌ ಇದೆ.

2021ರ ಏಪ್ರಿಲ್‌ನಲ್ಲಿ ಈ ಅಪಾರ್ಟ್‌ಮೆಂಟ್‌ ಅನ್ನು ಅಮಿತಾಬ್‌ ಬಚ್ಚನ್‌ ಅವರು ₹31 ಕೋಟಿಗೆ ಖರೀದಿಸಿದ್ದರು. ಇದೀಗ ನೋಂದಣಿ ಮಹಾಪರಿವೀಕ್ಷಕ ಹಾಗೂ ಮುದ್ರಾಂಕ ಆಯುಕ್ತರ (ಐಜಿಆರ್) ಪ್ರಕಾರ, ಈ ಅಪಾರ್ಟ್‌ಮೆಂಟ್‌ ಅನ್ನು ₹83 ಕೋಟಿಗೆ ಮಾರಾಟ ಮಾಡಲಾಗಿದೆ. ಅದರಂತೆ ಅಮಿತಾಬ್‌ ಅವರು ಶೇ 168ರಷ್ಟು ಲಾಭ ಪಡೆದಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

2021ರ ಏಪ್ರಿಲ್‌ನಲ್ಲಿ ಈ ಅಪಾರ್ಟ್‌ಮೆಂಟ್‌ ಅನ್ನು ಖರೀದಿಸಿದ್ದ ಅಮಿತಾಬ್‌, ಆದೇ ವರ್ಷ ನವೆಂಬರ್‌ನಲ್ಲಿ ನಟಿ ಕೃತಿ ಸನೋನ್ ಅವರಿಗೆ ಭದ್ರತಾ ಠೇವಣಿ ₹60 ಲಕ್ಷ ಮತ್ತು ಮಾಸಿಕ ₹10 ಲಕ್ಷದಂತೆ ಬಾಡಿಗೆಗೆ ನೀಡಿದ್ದರು ಎಂದು ಐಜಿಆರ್ ಗುತ್ತಿಗೆ ದಾಖಲೆಗಳಿಂದ ತಿಳಿದುಬಂದಿದೆ.

ಪಶ್ಚಿಮ ಮುಂಬೈನಲ್ಲಿರುವ ಓಶಿವಾರಾವು ಉತ್ತಮ ರಸ್ತೆಗಳು ಮತ್ತು ಮೆಟ್ರೊ ಸಂಪರ್ಕವನ್ನು ಹೊಂದಿರುವ ಪ್ರದೇಶವಾಗಿದ್ದು, ಆಧುನಿಕ ಜೀವನಶೈಲಿಗೆ ಹೆಸರುವಾಸಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.