ಇನ್‌ಸ್ಟಾಗ್ರಾಮ್ ಚಿತ್ರ
ಮುಂಬೈ: ಕನ್ನಡದ ‘ದಿ ವಿಲನ್’ ಚಿತ್ರದಲ್ಲಿ ನಟಿಸಿದ್ದ ಬ್ರಿಟನ್ ಮೂಲದ ನಟಿ ಆ್ಯಮಿ ಜಾಕ್ಸನ್ ಮತ್ತು ಎಡ್ ವೆಸ್ಟ್‌ವಿಕ್ ದಂಪತಿಗೆ ಗಂಡು ಮಗು ಜನಿಸಿದೆ.
ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡು ನಟಿ ಮಾಹಿತಿ ನೀಡಿದ್ದಾರೆ.
’ಜಗತ್ತಿಗೆ ಸ್ವಾಗತ. ಆಸ್ಕರ್ ಅಲೆಕ್ಸಾಂಡರ್ ವೆಸ್ಟ್‌ವಿಕ್’ ಎಂದು ಪೋಸ್ಟ್‌ನಲ್ಲಿ ಆ್ಯಮಿ ಜಾಕ್ಸನ್ ಬರೆದುಕೊಂಡಿದ್ದಾರೆ.
ಕಳೆದ ವರ್ಷ ಜನವರಿಯಲ್ಲಿ ಮದುವೆ ನಿಶ್ಚಯಿಸಿರುವುದಾಗಿ ಘೋಷಿಸಿದ್ದ ಜೋಡಿ, ಆಗಸ್ಟ್‌ನಲ್ಲಿ ಇಟಲಿಯಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.
ಭಾರತೀಯ ಚಿತ್ರರಂಗದಲ್ಲಿ ಹಲವು ಭಾಷೆಗಳ ಚಿತ್ರಗಳಲ್ಲೂ ಆ್ಯಮಿ ಕಾಣಿಸಿಕೊಂಡಿದ್ದಾರೆ.ಆ್ಯಮಿ ಜಾಕ್ಸನ್ ಮತ್ತು ಅವರ ಮಾಜಿ ಗೆಳೆಯ ಜಾರ್ಜ್ ಪನಾಯಿಟೊ ಅವರಿಗೆ 6 ವರ್ಷದ ಮಗನಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.