ADVERTISEMENT

ಲೈಗರ್ ಚಿತ್ರೀಕರಣದ ಮಧ್ಯೆ ಕುದುರೆ ಸವಾರಿ ಹೊರಟ ಅನನ್ಯಾ ಪಾಂಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2021, 10:39 IST
Last Updated 21 ನವೆಂಬರ್ 2021, 10:39 IST
ನಟಿ ಅನನ್ಯಾ ಪಾಂಡೆ
ನಟಿ ಅನನ್ಯಾ ಪಾಂಡೆ   

ಬೆಂಗಳೂರು: ವಿಜಯ್ ದೇವರಕೊಂಡ ಅಭಿನಯದ ಲೈಗರ್ ಸಿನಿಮಾಕ್ಕಾಗಿ ಅಮೆರಿಕದ ಲಾಸ್ ವೇಗಾಸ್‌ನಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ. ನಟಿ ಅನನ್ಯಾ ಪಾಂಡೆ ತಂಡದ ಜತೆ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

ಶೂಟಿಂಗ್ ತಾಣದಿಂದ ಅವರು ವಿಜಯ್ ದೇವರಕೊಂಡ ಮತ್ತು ಬಾಕ್ಸರ್ ಮೈಕ್ ಟೈಸನ್ ಜತೆಗಿನ ಫೋಟೊಗಳನ್ನು ಹಂಚಿಕೊಂಡಿದ್ದರು.

ಈ ಬಾರಿ ಅನನ್ಯಾ ಪಾಂಡೆ, ಕುದುರೆ ಸವಾರಿ ಮಾಡುತ್ತಿರುವ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಅಲ್ಲದೆ, ಅನನ್ಯಾ ಜತೆ ನಟ ವಿಜಯ್ ದೇವರಕೊಂಡ ಕೂಡ ಸಾಥ್ ನೀಡಿದ್ದಾರೆ.

ADVERTISEMENT

ಅಮೆರಿಕದ ಲಾಸ್ ವೇಗಾಸ್‌ನಲ್ಲಿ ಅನನ್ಯಾ ಪಾಂಡೆ ಕುದುರೆ ಸವಾರಿ ಮಾಡುತ್ತಾ ಕಾಲ ಕಳೆದಿದ್ದಾರೆ.

ಅನನ್ಯಾ ಅವರ ಪೋಸ್ಟ್‌ಗೆ ಮೂರು ಲಕ್ಷಕ್ಕೂ ಅಧಿಕ ಮಂದಿ ಲೈಕ್ ನೀಡಿದ್ದಾರೆ.

ಜತೆಗೆ ಇನ್‌ಸ್ಟಾಗ್ರಾಂ ಸ್ಟೋರೀಸ್‌ನಲ್ಲೂ ನಟಿ ಅನನ್ಯಾ ಪಾಂಡೆ ಕುದುರೆ ಸವಾರಿಯ ವಿಡಿಯೊ ಮತ್ತು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.