
ನಟ ಉಪೇಂದ್ರ ಹಾಗೂ ರಾಮ್ ಪೋತಿನೇನಿ ನಟಿಸಿರುವ 'ಆಂಧ್ರ ಕಿಂಗ್ ತಾಲೂಕಾ’ ಚಿತ್ರದ ಟ್ರೇಲರ್ ನಿನ್ನೆ (ಮಂಗಳವಾರ) ಬಿಡುಗಡೆಯಾಗಿದೆ. ಇಂದು ಬೆಂಗಳೂರಿನ ಮಾಲ್‌ವೊಂದರಲ್ಲಿ ಅದರ ಸಂಭ್ರಮಾಚರಣೆ ನಡೆಯಲಿದೆ ಎಂದು ವಿಡಿಯೊದ ಮೂಲಕ ಉಪೇಂದ್ರ ಮಾಹಿತಿ ನೀಡಿದ್ದಾರೆ.
ತೆಲುಗಿನ ಸ್ಟಾರ್ ಹೀರೊ ಸೂರ್ಯನ ಪಾತ್ರದಲ್ಲಿ ಉಪೇಂದ್ರ ಹಾಗೂ ಅಭಿಮಾನಿಯಾಗಿ ರಾಮ್ ಪೋತಿನೇನಿ ಕಾಣಿಸಿಕೊಂಡಿದ್ದಾರೆ.
ಮಧ್ಯಮ ಕುಟುಂಬದ ಯುವಕನೊಬ್ಬ 'ಆಂಧ್ರ ಕಿಂಗ್' (ಸೂರ್ಯನ) ಅಪ್ಪಟ ಅಭಿಮಾನಿ. ತನ್ನ ನೆಚ್ಚಿನ ನಟನ ಚಿತ್ರಗಳನ್ನು ಮೊದಲ ಪ್ರದರ್ಶನದಲ್ಲಿ ನೋಡಿ ಸಂಭ್ರಮಿಸುತ್ತಿರುತ್ತಾನೆ. ಈ ಚಿತ್ರದಲ್ಲಿ ಉಪೇಂದ್ರ ಹಾಗೂ ರಾಮ್ ಪೋತಿನೇನಿ ಅವರ ಭಾವನಾತ್ಮಕ ಸಂಬಂಧವನ್ನು ಕಾಣಬಹುದಾಗಿದೆ.
ಈ ಚಿತ್ರವನ್ನು ಪಿ. ಮಹೇಶ್ ಬಾಬು ನಿರ್ದೇಶಿಸಿದ್ದರೆ, ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ರವಿಶಂಕರ್ ಅವರು ನಿರ್ಮಿಸಿದ್ದಾರೆ. ವಿವೇಕ್ - ಮಾರ್ವಿನ್ ಸಂಗೀತ ಸಂಯೋಜಿಸಿದ್ದಾರೆ. ಸಿನಿಮಾದ ನಾಯಕಿಯಾಗಿ ಭಾಗ್ಯಶ್ರೀ ಬೋರ್ಸೆ ನಟಿಸಿದ್ದಾರೆ.
‘ಆಂಧ್ರ ಕಿಂಗ್ ತಾಲೂಕಾ' ನ.28ರಂದು ತೆರೆ ಕಾಣಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.