ADVERTISEMENT

ರಣಬೀರ್‌–ಅಲಿಯಾ ಭಟ್‌ಗೆ ಪ್ರಶಸ್ತಿ: ನೆಪೋಟಿಸಂ ವಿರುದ್ಧ ಕಂಗನಾ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2023, 8:40 IST
Last Updated 21 ಫೆಬ್ರುವರಿ 2023, 8:40 IST
   

ರಣಬೀರ್ ಕಪೂರ್–ಅಲಿಯಾ ಭಟ್ ವಿರುದ್ಧ ಮೊದಲಿನಿಂದಲೂ ಪರೋಕ್ಷವಾಗಿ ಕಿಡಿ ಕಾರುತ್ತಾ ಬಂದಿರುವ ಕಂಗನಾ ರನೌತ್‌, ದಾದಾ ಸಾಹೇಬ್​ ಫಾಲ್ಕೆ ಅಂತರರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ಈ ಜೋಡಿಗೆ ಲಭಿಸಿದ ಬಳಿಕ ನೆಪೋಟಿಸಂ ವಿರುದ್ಧ ಕಿಡಿಕಾರಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಕಂಗನಾ, ‘ಪ್ರಶಸ್ತಿಗಳ ಋತು ಪ್ರಾರಂಭವಾಗಿದೆ. ನೆಪೋಟಿಸಂ ಮಾಫಿಯಾ ಪ್ರಾರಂಭವಾಗಿ ಪ್ರತಿಭಾವಂತರಿಗೆ ಸಿಗಬೇಕಿರುವ ಪ್ರಶಸ್ತಿಗಳನ್ನು ಕಸಿದುಕೊಳ್ಳಲಿದೆ. 2022ರಲ್ಲಿ ನಿಜವಾಗಿಯೂ ಪ್ರಶಸ್ತಿ ಪಡೆಯಬೇಕಾದವರ ಪಟ್ಟಿ ಇಲ್ಲಿದೆ’ ಎಂದಿದ್ದಾರೆ. ಜೊತೆಗೆ ತಮ್ಮ ದೃಷ್ಟಿಯಲ್ಲಿ ಪ್ರಶಸ್ತಿಗೆ ಅರ್ಹವಾದವರ ಪಟ್ಟಿಯನ್ನು ಪ್ರಕಟಿಸಿದ್ದಾರೆ.

ಸೋಮವಾರ ದಾದಾ ಸಾಹೇಬ್​ ಫಾಲ್ಕೆ ಅಂತರರಾಷ್ಟ್ರೀಯ ಸಿನಿಮೋತ್ಸವ ಪ್ರಶಸ್ತಿ ವಿತರಣೆಯಾಗಿದ್ದು, ನಟ ರಣಬೀರ್ ಕಪೂರ್ (ಬ್ರಹ್ಮಾಸ್ತ್ರ) ಉತ್ತಮ ನಟ, ಅಲಿಯಾ ಭಟ್ ಉತ್ತಮ ನಟಿ ( ಗಂಗೂಬಾಯಿ ಕಾಥಿಯಾವಾಡಿ ) ಪ್ರಶಸ್ತಿ ಪಡೆದುಕೊಂಡಿದ್ದರು.

ADVERTISEMENT

ಕಂಗನಾ ಪ್ರಕಾರ ರಿಷಬ್‌ ಶೆಟ್ಟಿ(ಕಾಂತಾರ) ಅತ್ಯುತ್ತಮ ನಟರು. ‘ಸೀತಾ ರಾಮಂ’ ಚಿತ್ರಕ್ಕಾಗಿ ಮೃಣಾಲ್‌ ಠಾಕೂರ್‌ ಅವರನ್ನು ಅತ್ಯುತ್ತಮ ನಟಿ ಎಂದು ಹೆಸರಿಸಿದ್ದಾರೆ. ‘ಆರ್‌ಆರ್‌ಆರ್‌’ ಅತ್ಯುತ್ತಮ ಚಿತ್ರ, ‘ಕಾಶ್ಮೀರ್‌ ಫೈಲ್ಸ್‌’ಗಾಗಿ ಅನುಪಮ್‌ ಖೇರ್‌ ಅತ್ಯುತ್ತಮ ಪೋಷಕ ನಟ ಎಂದು ಕಂಗನಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.