ADVERTISEMENT

OTTಗೆ ಬಂತು 3 ಗಂಟೆ 40 ನಿಮಿಷಗಳ ಬಾಹುಬಲಿ ಎಪಿಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಡಿಸೆಂಬರ್ 2025, 10:13 IST
Last Updated 26 ಡಿಸೆಂಬರ್ 2025, 10:13 IST
ಬಾಹುಬಲಿ
ಬಾಹುಬಲಿ   

ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಹಾಗೂ ಬಾಹುಬಲಿ ಬಿಗಿನಿಂಗ್ (ಭಾಗ –1) ಹಾಗೂ ಬಾಹುಬಲಿ ದಿ ಕನ್ಕ್ಲೂಷನ್ (ಭಾಗ–2) ಸಿನಿಮಾಗಳು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಂಚಲನ ಸೃಷ್ಟಿಸಿದ್ದವು. ಇದರ ಜೊತೆಗೆ ಇತ್ತೀಚೆಗೆ ಅಕ್ಟೋಬರ್ 31ರಂದು ಈ ಎರಡೂ ಭಾಗಗಳನ್ನು ಸಂಕಲನ ಮಾಡಿ ವಿಶ್ವದಾದ್ಯಂತ ಬಾಹುಬಲಿ ಎಪಿಕ್ ಅನ್ನು ಬಿಡುಗಡೆ ಮಾಡಿದ್ದರು.

ಬಾಹುಬಲಿಯ ಎರಡೂ ಭಾಗಗಳನ್ನು ಸಂಕಲನ ಮಾಡಿ 3 ಗಂಟೆ 40 ನಿಮಿಷಗಳ ಒಂದೇ ಸಿನಿಮಾವನ್ನು ‘ಬಾಹುಬಲಿ ಎಪಿಕ್’ ಹೆಸರಿನಲ್ಲಿ ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರು ಬಿಡುಗಡೆ ಮಾಡಿದ್ದರು. ಇದೀಗ ಈ ಬಾಹುಬಲಿ ಎಪಿಕ್ ಒಟಿಟಿಗೆ ಲಗ್ಗೆ ಇಟ್ಟಿದೆ.

ಅಕ್ಟೋಬರ್ 31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ಬಾಹುಬಲಿ ಎಪಿಕ್, ವಿಶ್ವದಾದ್ಯಂತ ₹52 ಕೋಟಿ ಗಳಿಕೆ ಕಂಡಿತ್ತು. ಇದೀಗ ಈ ಸಿನಿಮಾ ನಿನ್ನೆಯಿಂದ (ಡಿಸೆಂಬರ್ 25) ನೆಟ್‌ಫ್ಲಿಕ್ಸ್‌ ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ADVERTISEMENT

ಬಾಹುಬಲಿ ಎಪಿಕ್ ಸಿನಿಮಾವನ್ನು ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಒಟಿಟಿಯಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ನೆಟ್‌ಫ್ಲಿಕ್ಸ್ ಅಧಿಕೃತ ಮಾಹಿತಿ ಹಂಚಿಕೊಂಡಿದೆ. 3 ಗಂಟೆ 40 ನಿಮಿಷಗಳ ಬಾಹುಬಲಿ ಎಪಿಕ್ ಅನ್ನು ಮೊಬೈಲ್‌ನಲ್ಲೇ ವೀಕ್ಷಣೆ ಮಾಡಬಹುದಾಗಿದೆ.

ದೇಶದಾದ್ಯಂತ ಬಿಡುಗಡೆಯಾಗಿದ್ದ ಬಾಹುಬಲಿ ಮೊದಲ ಭಾಗದಲ್ಲಿ ಕಟ್ಟಪ್ಪ ಬಾಹುಬಲಿಯನ್ನು ಯಾವ ಕಾರಣಕ್ಕೆ ಕೊಂದನು ಎಂಬ ಕುತೂಹಲ ಉಳಿಸಿದ್ದರು. ಅದರಂತೆ, ಬಿಡುಗಡೆಯಾದ ಎರಡನೇ ಭಾಗ ದಾಖಲೆಯ ಪ್ರದರ್ಶನದ ಮೂಲಕ ಸಂಚಲನ ಸೃಷ್ಟಿಸಿತ್ತು.

ಬಾಹುಬಲಿ ಮೊದಲ ಮತ್ತು ಎರಡನೇ ಭಾಗದ ಸಂಕಲನವಾಗಿರುವ ಬಾಹುಬಲಿ ಎಪಿಕ್ ಸಿನಿಮಾ ಒಟಿಟಿಯಲ್ಲಿ ನಿನ್ನೆಯಿಂದ ಸ್ಟ್ರೀಮಿಂಗ್ ಆಗುತ್ತಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವುದನ್ನು ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ನೋಡಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.