ADVERTISEMENT

‘ಬೈರಾಗಿ’ಯಲ್ಲಿ ಹುಲಿ ಘರ್ಜನೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2022, 19:30 IST
Last Updated 17 ಮಾರ್ಚ್ 2022, 19:30 IST
 ಶಿವರಾಜ್‌ಕುಮಾರ್‌ ಹಾಗೂ ‘ಡಾಲಿ’ ಧನಂಜಯ್
ಶಿವರಾಜ್‌ಕುಮಾರ್‌ ಹಾಗೂ ‘ಡಾಲಿ’ ಧನಂಜಯ್    

ನಟ ಶಿವರಾಜ್‌ಕುಮಾರ್ ನಟನೆಯ 123ನೇ ಸಿನಿಮಾ ‘ಬೈರಾಗಿ’ಯ ಟೀಸರ್‌ ಬಿಡುಗಡೆಯಾಗಿದ್ದು, ಹುಲಿ ಘರ್ಜನೆ ಭರ್ಜರಿಯಾಗಿದೆ.

‘ವೇಷ ಹಾಕಿದಾಗ ಮಾತ್ರವಲ್ಲ. ನಾವು ಯಾವಾಗಲೂ ಹುಲಿಯೇ ಎಂದು ದೊಡ್ಡವರು ಹೇಳಿ ಬೆಳೆಸಿದರು. ನಾನು ಬೆಳೆಯುತ್ತಾ ಬೆಳೆಯುತ್ತಾ ಆ ಹುಲೀನೂ ನನ್ನ ಜೊತೆ ಬೆಳೆಯಿತು’ ಎನ್ನುತ್ತಾ ಪ್ರವೇಶಿಸುವ ಶಿವರಾಜ್‌ಕುಮಾರ್‌ ಅವರ ಭರ್ಜರಿ ಆ್ಯಕ್ಷನ್‌ ದೃಶ್ಯಗಳಿಗೆ, ಖಡಕ್‌ ಡೈಲಾಗ್‌ಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ‘ಜೇಮ್ಸ್‌’ ಚಿತ್ರದ ಜೊತೆಗೂ ‘ಬೈರಾಗಿ’ ಸಿನಿಮಾದ ಟೀಸರ್‌ ಸದ್ದು ಮಾಡುತ್ತಿದ್ದೆ. ನಿರ್ದೇಶಕ ಎಸ್‌.ಡಿ. ವಿಜಯ್ ಮಿಲ್ಟನ್ ನಿರ್ದೇಶನ ಚಿತ್ರಕ್ಕಿದೆ.

‘ಟಗರು’ ಸಿನಿಮಾ ಯಶಸ್ಸಿನ ಬಳಿಕ ಶಿವರಾಜ್‌ಕುಮಾರ್‌ ಹಾಗೂ ‘ಡಾಲಿ’ ಧನಂಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಈ ಸಿನಿಮಾ ಮೇಲೆ ಜನರ ನಿರೀಕ್ಷೆ ಬಹಳಷ್ಟಿದೆ. ಶಿವರಾಜ್‌ಕುಮಾರ್‌ ಅವರ ಹುಲಿವೇಷದ ಗೆಟಪ್ ಎಲ್ಲೆಡೆ ವೈರಲ್ ಆಗಿದೆ. ಅಂಜಲಿ ಈ ಚಿತ್ರದ ನಾಯಕಿ. ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್‌ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿದ್ದಾರೆ. ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಕೃಷ್ಣ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಕೃಷ್ಣ ಸಾರ್ಥಕ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.