ADVERTISEMENT

ವಿನೋದ್‌ ಪ್ರಭಾಕರ್‌ ನಟನೆಯ ‘ಬಲರಾಮನ ದಿನಗಳು’ ಸಿನಿಮಾದ ಮೊದಲ ಹಾಡು ಬಿಡುಗಡೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2025, 11:06 IST
Last Updated 17 ಡಿಸೆಂಬರ್ 2025, 11:06 IST
<div class="paragraphs"><p>ವಿನೋದ್‌ ಪ್ರಭಾಕರ್‌,&nbsp;ನಟಿ ಪ್ರಿಯಾ ಆನಂದ್</p></div>

ವಿನೋದ್‌ ಪ್ರಭಾಕರ್‌, ನಟಿ ಪ್ರಿಯಾ ಆನಂದ್

   

‘ಆ ದಿನಗಳು’ ಖ್ಯಾತಿಯ ಕೆ‌.ಎಂ.ಚೈತನ್ಯ ನಿರ್ದೇಶನದಲ್ಲಿ ವಿನೋದ್‌ ಪ್ರಭಾಕರ್‌ ನಾಯಕರಾಗಿ ನಟಿಸುತ್ತಿರುವ ‘ಬಲರಾಮನ ದಿನಗಳು’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ.

ಟಿ-ಸೀರೀಸ್ ಕನ್ನಡ ಯ್ಯೂಟೂಬ್ ಚಾನೆಲ್‌ನಲ್ಲಿ ಬಲರಾಮನ ದಿನಗಳು ಸಿನಿಮಾದ ಮೊದಲ ‘ಶುರು ಶುರು ಅಲೆ ಹೃದಯದಲ್ಲಿ’ ಹಾಡನ್ನು ಬಿಡುಗಡೆ ಮಾಡಲಾಗಿದೆ. ಇದೀಗ ಈ ಹಾಡು ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ವಿಶೇಷ ಏನೆಂದರೆ ಇದೇ ಮೊದಲ ಬಾರಿಗೆ ಕನ್ನಡದ ಸಿನಿಮಾಗೆ ಸಂತೋಷ್‌ ನಾರಾಯಣನ್‌ ಸಂಗೀತ ನಿರ್ದೇಶಿಸಿದ್ದಾರೆ.

ADVERTISEMENT

90ರ ದಶಕದ ಕಾಲಘಟ್ಟದ ಭೂಗತ ಲೋಕದ ಕಥೆ ಇದಾಗಿದ್ದು, ಯಾವುದೇ ನೈಜ ಘಟನೆ ಅಥವಾ ವ್ಯಕ್ತಿಯ ಕುರಿತಾದ ಚಿತ್ರವಲ್ಲ. ಕಾಲ್ಪನಿಕ ಕಥೆಯಾಗಿದೆ. ವಿಶೇಷ ಏನೆಂದರೆ ಇದೇ ಮೊದಲ ಬಾರಿಗೆ ಕನ್ನಡದ ಬಲರಾಮನ ದಿನಗಳು ಸಿನಿಮಾಗೆ ಸಂತೋಷ್‌ ನಾರಾಯಣನ್‌ ಸಂಗೀತ ನಿರ್ದೇಶಿಸಿದ್ದಾರೆ. ಈ ಹಿಂದೆ ‘ಕಬಾಲಿ’, ‘ಭೈರವ’ದಿಂದ ಇತ್ತೀಚೆಗೆ ತೆರೆಕಂಡ ‘ಕಲ್ಕಿ’ ಸಿನಿಮಾವರೆಗೂ 50 ಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ್ದಾರೆ.

ಇನ್ನು, ಈ ಸಿನಿಮಾದಲ್ಲಿ ನಟ ವಿನೋದ್ ಪ್ರಭಾಕರ್, ನಟಿ ಪ್ರಿಯಾ ಆನಂದ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಪದ್ಮಾವತಿ ಫಿಲಂಸ್ ಎಂಬ ನೂತನ ನಿರ್ಮಾಣ ಸಂಸ್ಥೆಯ ವತಿಯಿಂದ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.