ADVERTISEMENT

All We Imagine As Light: ಮಾಜಿ ಅಧ್ಯಕ್ಷ ಒಬಾಮಾ ಇಷ್ಟಪಟ್ಟ ಭಾರತದ ಸಿನಿಮಾ ಇದು

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2024, 7:18 IST
Last Updated 21 ಡಿಸೆಂಬರ್ 2024, 7:18 IST
<div class="paragraphs"><p>ಬರಾಕ್ ಒಬಾಮಾ ಮತ್ತು&nbsp;ಆಲ್‌ ವಿ ಇಮ್ಯಾಜಿನ್‌ ಆ್ಯಸ್ ಲೈಟ್‌ ಚಿತ್ರದ ದೃಶ್ಯ</p></div>

ಬರಾಕ್ ಒಬಾಮಾ ಮತ್ತು ಆಲ್‌ ವಿ ಇಮ್ಯಾಜಿನ್‌ ಆ್ಯಸ್ ಲೈಟ್‌ ಚಿತ್ರದ ದೃಶ್ಯ

   

ವಾಷ್ಟಿಂಗ್ಟನ್‌: ಪಾಯಲ್ ಕಪಾಡಿಯಾ ಅವರ ಹೊಸ ಸಿನಿಮಾ ‘ಆಲ್‌ ವಿ ಇಮ್ಯಾಜಿನ್‌ ಆ್ಯಸ್ ಲೈಟ್‌’ ಚಿತ್ರವು ಜಾಗತಿಕ ಮನ್ನಣೆ ಪಡೆದು ಈಗಾಗಲೇ ಬಹಳಷ್ಟು ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು 2024ರಲ್ಲಿ ನೋಡಲೇಬೇಕಾದ ಸಿನಿಮಾಗಳ ಪಟ್ಟಿಯನ್ನು ಹಂಚಿಕೊಂಡಿದ್ದು, ಅದರಲ್ಲಿ ಭಾರತದ ಈ ಸಿನಿಮಾ ಮೊದಲ ಸ್ಥಾನ ಪಡೆದುಕೊಂಡಿದೆ.

ಒಬಾಮಾ ಅವರು ತಮ್ಮ ನೆಚ್ಚಿನ ಸಿನಿಮಾ, ಪುಸ್ತಕ ಹಾಗೂ ಹಾಡುಗಳ ಕುರಿತು ಆಗಾಗ್ಗ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಆ ಮೂಲಕ ಜಾಗತಿಕ ಮಟ್ಟದ ತಮ್ಮ ಫಾಲೋವರ್‌ಗಳಿಗೆ ಮಾಹಿತಿ ನೀಡುತ್ತಿರುತ್ತಾರೆ. ಇದೀಗ 2024ರ ತಮ್ಮ ನೆಚ್ಚಿನ ಸಿನಿಮಾ ಪಟ್ಟಿಯನ್ನು ಅವರು ಹಂಚಿಕೊಂಡಿದ್ದು, ಅದರಲ್ಲಿ ಗೋಲ್ಡನ್ ಗ್ಲೋಬ್‌ಗೆ ನಾಮನಿರ್ದೇಶನಗೊಂಡ ಪಾಯಲ್ ಕಪಾಡಿಯಾ ಅವರು ‘ಆಲ್‌ ವಿ ಇಮ್ಯಾಜಿನ್‌ ಆ್ಯಸ್ ಲೈಟ್‌’ ಸಿನಿಮಾ ವಾರ್ಷಿಕ ಅತ್ಯುತ್ತಮ ಸಿನಿಮಾ ಎಂದು ಹೇಳಿದ್ದಾರೆ. 

ADVERTISEMENT

ಈ ಪಟ್ಟಿಯಲ್ಲಿ ಸ್ಥಾನ ಪಡೆದ ಇತರ ಚಿತ್ರಗಳಲ್ಲಿ ಡೆನಿಸ್ ವಿಲ್ಲೆನ್ಯೂ ಅವರ ಡ್ಯೂನ್‌ 2ನೇ ಭಾಗ. ಸೀನ್‌ ಬೇಕರ್ ಅವರ ಅನೋರಾ, ಎಡ್ವರ್ಡ್‌ ಬರ್ಗರ್‌ ಅವರ ಕಾನ್‌ಕ್ಲೇವ್, ಮಾಲ್ಕಲಮ್‌ ವಾಷಿಂಗ್ಟನ್ ಅವರ ದಿ ಪಿಯಾನೊ ಲೆಸ್ಸನ್‌ ಸೇರಿದಂತೆ ಹತ್ತು ಸಿನಿಮಾಗಳ ಹೆಸರುಗಳನ್ನು ಅವರು ಹಂಚಿಕೊಂಡಿದ್ದಾರೆ.

ಕಾನ್‌ ಸಿನಿಮೋತ್ಸವದೊಂದಿಗೆ ಕಪಾಡಿಯಾ ಅವರ ಚಿತ್ರವು ಯಶಸ್ಸಿನ ಯಾತ್ರೆ ಆರಂಭಿಸಿ, ಗ್ರ್ಯಾಂಡ್‌ ಪ್ರಿಕ್ಸ್‌ ಪ್ರಶಸ್ತಿ ಪಡೆಯುವವರೆಗೂ ಮುಂದುವರಿದಿದೆ. 1994ರಲ್ಲಿ ಶಾಜಿ ಎನ್. ಕರುಣ ಅವರ ‘ಸ್ವಾಹಂ’ ಚಿತ್ರದ ನಂತರ ‘ಆಲ್‌ ವಿ ಇಮ್ಯಾಜಿನ್‌ ಆ್ಯಸ್ ಲೈಟ್‌’ ಚಿತ್ರವು ಪ್ರತಿಷ್ಠಿತ ಸಿನಿಮಾ ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ಪ್ರದರ್ಶನ ಕಂಡಿದೆ. 

ಈ ಸಿನಿಮಾವನ್ನು ನ್ಯೂಯಾರ್ಕ್‌ ಸಿನಿಮಾ ವಿಮರ್ಶಕರ ವೃತ್ತವು ಅತ್ಯುತ್ತಮ ಅಂತರರಾಷ್ಟ್ರೀಯ ಚಿತ್ರವೆಂದೂ ಹಾಗೂ ಗೋಥಮ್ ಅವಾರ್ಡ್ಸ್‌ 2024ರಲ್ಲಿ ಅತ್ಯುತ್ತಮ ಅಂತರರಾಷ್ಟ್ರೀಯ ಚಿತ್ರ ಟ್ರೋಫಿಯನ್ನು ಬಾಚಿಕೊಂಡಿದೆ. ಕೇರಳದ 29ನೇ ಅಂತರರಾಷ್ಟ್ರೀಯ ಸಿನಿಮೋತ್ಸವದಲ್ಲಿ ಪಾಯಲ್ ಕಪಾಡಿಯಾ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಪ್ರಭಾ ಎಂಬ ಶುಶ್ರೂಷಕಿಯು ತಮ್ಮ ಮಾಜಿ ಪತಿಯಿಂದ ಬಂದ ಅನಿರೀಕ್ಷಿತ ಉಡುಗೊರೆ ಹಾಗೂ ಆಕೆಯ ಜೊತೆಗಿರುವ ಯುವತಿ ಅನು, ತನ್ನ ಗೆಳೆಯನೊಂದಿಗೆ ಕಳೆಯಬೇಕೆಂದುಕೊಂಡಿರುವ ಖಾಸಗಿ ಸಮಯ. ಈ ಇಬ್ಬರು ಒಮ್ಮೆ ತೀರ ಪ್ರದೇಶದ ಪ್ರವಾಸ ಕೈಗೊಳ್ಳುತ್ತಾರೆ. ಅಲ್ಲಿ ತಮ್ಮ ಆಸೆ ಹಾಗೂ ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುವ ಕಥಾವಸ್ತುವನ್ನು ‘ಆಲ್‌ ವಿ ಇಮ್ಯಾಜಿನ್‌ ಆ್ಯಸ್ ಲೈಟ್‌’ ಚಿತ್ರ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.