ವರುಣ್ ಧವನ್
ನವದೆಹಲಿ: ಮಗಳಿಗೆ ತಂದೆಯಾಗಿರುವುದು ಜೀವನದಲ್ಲಿ ವಿಭಿನ್ನ ಅನುಭವಗಳನ್ನು ನೀಡಲಿದೆ ಎಂದು ಬಾಲಿವುಡ್ ನಟ ವರುಣ್ ಧವನ್ ಹೇಳಿದ್ದಾರೆ.
ವರುಣ್ ಧವನ್ ಮತ್ತು ಪತ್ನಿ ನತಾಶಾ ದಂಪತಿಗೆ ಕಳೆದ ಜೂನ್‌ನಲ್ಲಿ ಹೆಣ್ಣು ಮಗು ಜನಿಸಿತ್ತು.
ದೆಹಲಿಯಲ್ಲಿ ವರುಣ್ ತಮ್ಮ ಮುಂಬರುವ ‘ಬೇಬಿ ಜಾನ್’ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಹೆಣ್ಣು ಮಗುವಿಗೆ ತಂದೆಯಾಗುವುದೆಂದರೆ ಅದೊಂದು ಬೇರೆ ರೀತಿಯ ಅನುಭವ. ನಿಮ್ಮ ಯೋಚನಾಲಹರಿಯನ್ನು ಬಹಳಷ್ಟು ಬದಲಾಯಿಸಲಿದೆ. ಚಿಕ್ಕಂದಿನಲ್ಲಿ ತಮ್ಮ ತಾಯಂದಿರು ನಮಗೆ ಹೇಳಿಕೊಟ್ಟಿದ್ದು ಮರಳಿ ನೆನಪಾಗಲಿದೆ. ಮಗಳು ನಿಜವಾದ ಜೀವನ ಎಂದರೆ ಏನು ಎನ್ನುವುದನ್ನು ಕಲಿಸುತ್ತಾಳೆ. ಜತೆಗೆ ಪುರುಷರ ನಿಜವಾದ ಜವಾಬ್ದಾರಿ ಅರ್ಥವಾಗಲಿದೆ’ ಎಂದು ಹೇಳಿದ್ದಾರೆ.
ಬೇಬಿ ಜಾನ್ ಚಿತ್ರವನ್ನು ಕಲೀಸ್ ಎನ್ನುವವರು ನಿರ್ದೇಶನ ಮಾಡಿದ್ದು, ವರುಣ್ ಧವನ್, ವಮಿಗಾ ಗಬ್ಬಿ, ಕೀರ್ತಿ ಸುರೇಶ್, ಜಾಕಿ ಶ್ರಫ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಲ್ಮಾನ್ ಖಾನ್ ಅವರು ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ. ಸಲ್ಮಾನ್ ಅವರೊಂದಿಗೆ ಕೆಲಸ ಮಾಡಿರುವುದು ಅದ್ಭುತ ಅನುಭವವಾಗಿದೆ ಎಂದು ವರುಣ್ ವಿವರಿಸಿದ್ದಾರೆ.
ಬೇಬಿ ಜಾನ್ ಚಿತ್ರ ಡಿ. 25ರಂದು ತೆರೆ ಕಾಣುತ್ತಿದೆ.
ದೆಹಲಿ ಭೇಟಿ ವೇಳೆ ವರುಣ್ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.