ADVERTISEMENT

‘ಭರತ್ ನಾಮ್ ಸಮ್ಮಾನ್’: ದೇಶಭಕ್ತಿ ಸಾರುವ ಹಾಡು

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 23:30 IST
Last Updated 7 ಸೆಪ್ಟೆಂಬರ್ 2025, 23:30 IST
ಮಹೇಂದ್ರ ಮುಣೋತ್‌
ಮಹೇಂದ್ರ ಮುಣೋತ್‌   

ಕನ್ನಡದ ಕೆಲ ಸಿನಿಮಾಗಳನ್ನು ನಿರ್ಮಿಸಿ, ನಟಿಸಿರುವ ಮಹೇಂದ್ರ ಮುಣೋತ್‌ ಅವರ ‘ಭರತ್ ನಾಮ್ ಸಮ್ಮಾನ್’ ದೇಶಭಕ್ತಿಯ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ.

ಭಾರತವನ್ನು ಭಾರತವೆಂದೇ ಕರೆಯಿರಿ ಎಂಬ ಸಂದೇಶ ಹೊಂದಿರುವ ಈ ಹಾಡು 22 ಭಾಷೆಗಳಲ್ಲಿ ಬಿಡುಗಡೆಗೊಂಡಿದೆ. ಮಹೇಂದ್ರ ಮುಣೋತ್‌ ವಿಡಿಯೊದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಮೊಹಮ್ಮದ್ ಸಲಾಮತ್, ದೀಪಕ್‌, ರೇಖಾ ರಾವ್ ಮೊದಲಾದವರು ಹಾಡಿಗೆ ಧ್ವನಿಯಾಗಿದ್ದಾರೆ. ಗಗನ್‌ ಆರ್‌.ಛಾಯಾ ಗ್ರಹಣಚಿತ್ರಗ್ರಹಣವಿದ್ದು, ಬಿ.ಪಿ. ಹರಿಹರನ್‌ ಈ ಗೀತೆಯನ್ನು ನಿರ್ದೇಶಿಸಿದ್ದಾರೆ. ಕರ್ನಾಟಕದಿಂದ ರಾಜಸ್ಥಾನದವರೆಗೆ ಹಲವು ತಾಣಗಳಲ್ಲಿ ಹಾಡನ್ನು ಚಿತ್ರೀಕರಿಸಲಾಗಿದೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.