
ಶ್ರುತಿ ಪ್ರಕಾಶ್
ಚಿತ್ರ: ಇನ್‌ಸ್ಟಾಗ್ರಾಂ
ಕನ್ನಡದ ಬಿಗ್‌ಬಾಸ್ ಮಾಜಿ ಸ್ಪರ್ಧಿ, ಗಾಯಕಿ, ನಟಿ ಶ್ರುತಿ ಪ್ರಕಾಶ್ ಅವರ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ನಟಿ ಶ್ರುತಿ ಪ್ರಕಾಶ್ ಅವರು ದುಬಾರಿ ಕಾರನ್ನು ಖರೀದಿಸಿದ್ದಾರೆ. ಇದೇ ವಿಚಾರವನ್ನು ಅವರು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊದಲ್ಲಿ ನಟಿ ಶ್ರುತಿ ಪ್ರಕಾಶ್ ಅವರು ಸ್ಕೋಡಾ ಸ್ಲಾವಿಯಾ ಮಾಂಟೆ ಕಾರ್ಲೊ 1.5 ಹೆಸರಿನ ಕಾರನ್ನು ನೋಡುತ್ತಿದ್ದಂತೆ ಭಾವುಕರಾಗಿದ್ದಾರೆ. ವಿಡಿಯೊ ಜೊತೆಗೆ ‘ಮೊದಲ ಕಾರು, ಇದು ಮೊದಲ ಪ್ರೀತಿಯಂತೆ ಭಾಸವಾಗುತ್ತಿದೆ’ ಎಂದಿದ್ದಾರೆ.
‘ಬಾಂಬೆ 10 ವರ್ಷಗಳು ನನಗೆ ತಾಳ್ಮೆ, ನಂಬಿಕೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಕಲಿಸಿದೆ. ಪ್ರತಿ ಆಡಿಷನ್, ಪ್ರತಿ ಕಾಯುವಿಕೆ, ಕೆಲಸವಿಲ್ಲದೆ ಬದುಕಿದ ಪ್ರತಿ ದಿನವೂ ನನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಿದೆ. ಜಗತ್ತು ನಿನ್ನಿಂದ ಏನೂ ಸಾಧ್ಯವಿಲ್ಲ ಎಂದು ಹೇಳಿದಾಗಲೂ, ನಾನು ಮಾಡಿಯೇ ತೀರುತ್ತೇನೆ ಎಂದು ಹೇಳುವ ಸಣ್ಣ ಧ್ವನಿಯನ್ನು ನಾನು ಹಿಡಿದಿಟ್ಟುಕೊಂಡೆ. ಭಯಕ್ಕಿಂತ ನಂಬಿಕೆಯ ತುಂಬಿದ ದೇವರಿಗೆ, ನನ್ನ ಹೆತ್ತವರಿಗೆ ಹಾಗೂ ಜಗತ್ತಿಗೆ ಕೃತಜ್ಞನಾಗಿದ್ದೇನೆ. ಮೊದಲ ಕಾರು.. ಮನೆಗೆ ಬರುವ ಅನೇಕ ಕನಸುಗಳಲ್ಲಿ ಮೊದಲನೆಯದು. ಮತ್ತು ಇದೀಗ ಪ್ರಯಾಣ ಪ್ರಾರಂಭವಾಗಿದೆ. ಸ್ಕೋಡಾ ಸ್ಲಾವಿಯಾ ಮಾಂಟೆ ಕಾರ್ಲೊ 1.5’ ಎಂದು ಬರೆದುಕೊಂಡಿದ್ದಾರೆ.
ಶ್ರುತಿ ಅವರು ಬೆಳಗಾವಿಯಲ್ಲಿ ಜನಿಸಿದರು. ಹಿಂದಿಯ ‘ಸಾಥ್ ನಿಬಾನಾ ಸಾಥಿಯಾ’ ಧಾರಾವಾಹಿ ಮೂಲಕ ಜನಪ್ರಿಯತೆ ಪಡೆದುಕೊಂಡರು. ಬಳಿಕ ಕನ್ನಡದ ಬಿಗ್‌ಬಾಸ್ ಸೀಸನ್ 5ಕ್ಕೆ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಎಲ್ಲರ ಗಮನ ಸೆಳೆದಿದ್ದರು. ಸದ್ಯ ನಟಿ ಶ್ರುತಿ ಹೊಸ ಕಾರಿ ಖರೀದಿಸಿದ ಖುಷಿಯಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.