
ಬಿಗ್‌ಬಾಸ್ ಖ್ಯಾತಿಯ ಅಭಿಷೇಕ್ ಶ್ರೀಕಾಂತ್ ನಾಯಕನಾಗಿ ನಟಿಸಿರುವ ‘ಫೆಬ್ರವರಿ 30’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಸೈಕಲಾಜಿಕಲ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರಕ್ಕೆ ಪ್ರಶಾಂತ್ ಎಂ.ಎಲ್. ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಈ ಹಿಂದೆ ಕೆಲ ಕಿರುಚಿತ್ರಗಳನ್ನು ಮಾಡಿದ್ದೆ. ನಿರ್ದೇಶಕನಾಗಿ ಮೊದಲ ಸಿನಿಮಾ. ಈ ಸಿನಿಮಾವನ್ನು ಮೊದಲು ಕಿರುಚಿತ್ರವೆಂದು ಶುರು ಮಾಡಿದ್ದು. ಬರೆಯುತ್ತ ಹೋದಂತೆ ಸಿನಿಮಾಕ್ಕೆ ಈ ಕಥೆ ಸೂಕ್ತ ಎನ್ನಿಸಿತು. ಕ್ಯಾಲೆಂಡರ್‌ನಲ್ಲಿ ಇಲ್ಲದ ಫೆ.30 ದಿನಾಂಕವನ್ನು ಯಾಕೆ ಸಿನಿಮಾದ ಶೀರ್ಷಿಕೆ ಮಾಡಿದ್ದೇವೆ ಎಂಬುದು ಚಿತ್ರ ನೋಡಿದ ನಂತರ ತಿಳಿಯುತ್ತದೆ’ ಎಂದರು ನಿರ್ದೇಶಕ.
ಈ ಚಿತ್ರಕ್ಕೆ ಶಂಕರ ಮೂವೀಸ್ ಮೂಲಕ ಜೋಸೆಫ್ ಬೇಬಿ ಅವರು ಬಂಡವಾಳ ಹೂಡಿದ್ದಾರೆ. ಸಾಹಿತ್ಯ ಶೆಟ್ಟಿ, ಅಕ್ಷಯ್, ಮನೋಜ್, ಶಿವಕುಮಾರ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪಿ.ಎಂ.ಉನ್ನಿಕೃಷ್ಣನ್ ಛಾಯಾಚಿತ್ರಗ್ರಹಣ, ಲಿಜಿನ್ ಪಂಬೋ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.