ADVERTISEMENT

BBK12 | ಉಸ್ತುವಾರಿನೇ ಸರಿಯಾಗಿರಲಿಲ್ಲ: ರಾಶಿಕಾಗೆ ಕಿಚ್ಚ ಸುದೀಪ್ ತರಾಟೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಡಿಸೆಂಬರ್ 2025, 11:36 IST
Last Updated 20 ಡಿಸೆಂಬರ್ 2025, 11:36 IST
<div class="paragraphs"><p>ರಾಶಿಕಾ, ಕಿಚ್ಚ ಸುದೀಪ್</p></div>

ರಾಶಿಕಾ, ಕಿಚ್ಚ ಸುದೀಪ್

   

ಬಿಗ್‌ಬಾಸ್‌ ಸೀಸನ್ 12ರ ‘ವಾರದ ಕಥೆ ಕಿಚ್ಚನ ಜೊತೆ’ ನಡೆಸಿಕೊಡಲು ಸುದೀಪ್ ಅವರು ವೇದಿಕೆಗೆ ಆಗಮಿಸಿದ್ದಾರೆ. ವೇದಿಕೆಗೆ ಬರುತ್ತಿದ್ದಂತೆ ವಾರದ ಉಸ್ತುವಾರಿಯಾಗಿದ್ದ ರಾಶಿಕಾಗೆ ತರಾಟೆ ತೆಗೆದುಕೊಂಡಿದ್ದಾರೆ. ಬಿಗ್‌ಬಾಸ್‌ ಸ್ಪರ್ಧಿಗಳಿಗೆ ನೀಡಿದ್ದ ಟಾಸ್ಕ್‌ಗಳ ಕುರಿತು ಮಾಡಿದ ಉಸ್ತುವಾರಿ ಬಗ್ಗೆ ಮಾತನಾಡಿದ್ದಾರೆ.

ಕಲರ್ಸ್ ಕನ್ನಡ ಸಾಮಾಜಿಕ ಮಾಧ್ಯಮದಲ್ಲಿ ಪ್ರೊಮೋ ಒಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ವೇದಿಕೆಗೆ ಬಂದ ಕಿಚ್ಚ ಸುದೀಪ್, ರಾಶಿಕಾ ಅವರೇ ಟಾಸ್ಕ್ ಅರ್ಥ ಆಯ್ತಾ ಎಂದು ಕೇಳಿದ್ದಾರೆ. ಆಗ ರಾಶಿಕಾ ‘ನಾನು ಕನ್ಫ್ಯೂಸ್‌ ಆಗಿದ್ದೆ. ಆದರೆ ಎಲ್ಲರೂ ತುಂಬಾ ಮಾತನಾಡುತ್ತಿದ್ದರು’ ಎಂದು ಹೇಳಿದ್ದಾರೆ. ಆ ಕೂಡಲೇ ಸುದೀಪ್‌ ‘ಯಾರು ಸರಿ ಇರಲಿಲ್ಲ. ಅದಕ್ಕಿಂತ ಹೆಚ್ಚಾಗಿ ‌ಉಸ್ತುವಾರಿನೇ ಸರಿಯಾಗಿ ಇರಲಿಲ್ಲ. ಅವರಿಗೆ ಉಸ್ತುವಾರಿ ಮಾಡೋದು ಹೇಗೆ ಅಂತ ಗೊತ್ತಾಗಿಲ್ಲ ಅಂದಕೂಡಲೇ ಉಳಿದವರು ಇದನ್ನು ಬಳಸಿಕೊಂಡು ಮ್ಯಾನಿಪ್ಯುಲೇಟ್‌ ಮಾಡಿದರು’ ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ.

ADVERTISEMENT

ಇನ್ನು ‘ಈ ಆಟ ಹದಗೆಡಿಸಲು ಚೈತ್ರಾ ಕಾರಣ’ ಎಂದು ರಜತ್‌ ಹೇಳಿದ್ದರು. ಆಗ ಸುದೀಪ್, ಈ ಮಧ್ಯೆ ಗಿಲ್ಲೋದು, ಪರಚೋದು, ಎಂಜಲು ಉಗಿಯೋದು ಮಾಡಿದ್ದಾರೆ. ನಾವು ಹತ್ತು, ಹನ್ನೆರಡು ವರ್ಷದವರಾ? ಎಂದು ಕಿಚ್ಚ ಸುದೀಪ್‌ ಹೇಳಿದ್ದನ್ನು ಪ್ರೊಮೋದಲ್ಲಿ ಕಾಣಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.