
ಸೂಪರ್ ಸ್ಟಾರ್ ಶಾರುಖ್ ಖಾನ್
ಲಖನೌ: ಬಾಂಗ್ಲಾದೇಶದ ಕ್ರಿಕೆಟಿಗನನ್ನು ತನ್ನ ಐಪಿಎಲ್ ತಂಡಕ್ಕೆ ಖರೀದಿಸಿದ ಬಾಲಿವುಡ್ ನಟ ಶಾರುಕ್ ಖಾನ್ ಅವರ ನಾಲಿಗೆ ಕತ್ತರಿಸಿದವರಿಗೆ ₹1 ಲಕ್ಷ ನಗದು ಬಹುಮಾನ ನೀಡುವುದಾಗಿ ಹಿಂದೂ ಪರ ಸಂಘಟನೆಯ ನಾಯಕಿಯೊಬ್ಬರು ಘೋಷಿಸಿದ್ದಾರೆ.
ಕ್ರಿಕೆಟಿಗ ಮುಸ್ತಾಫಿಝೂರ್ ರೆಹಮಾನ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿರುವುದನ್ನು ಅಖಿಲ ಭಾರತ ಹಿಂದೂ ಮಹಾಸಭಾದ ಆಗ್ರಾ ಜಿಲ್ಲಾ ಘಟಕದ ಅಧ್ಯಕ್ಷೆ ಮೀರಾ ಠಾಕೂರ್ ವಿರೋಧಿಸಿದ್ದಾರೆ. ಶಾರುಕ್ ಖಾನ್ ಚಿತ್ರವಿದ್ದ ಪೋಸ್ಟರ್‌ಗೆ ಮಸಿ ಬಳಿದು, ಚಪ್ಪಲಿಯಲ್ಲಿ ಹೊಡೆದಿದ್ದಾರೆ.
‘ನಮ್ಮ ಹಿಂದೂ ಸಹೋದರರು ಬಾಂಗ್ಲಾದಲ್ಲಿ ಜೀವಂತವಾಗಿ ದಹನವಾಗುತ್ತಿದ್ದಾರೆ. ಆದರೆ ಶಾರುಕ್ ಅಲ್ಲಿನ ಆಟಗಾರರನ್ನು ಖರೀದಿಸುತ್ತಿದ್ದಾರೆ. ನಾವಿದನ್ನು ಒಪ್ಪುವುದಿಲ್ಲ’ ಎಂದು ಮೀರಾ ಹೇಳಿದ್ದಾರೆ.
ಐಪಿಎಲ್ ತಂಡಕ್ಕೆ ರೆಹಮಾನ್ ಸೇರ್ಪಡೆಯನ್ನು ಅಯೋಧ್ಯೆ ಮತ್ತು ಇತರ ಭಾಗಗಳ ಹಲವು ಸ್ವಾಮೀಜಿಗಳು ವಿರೋಧಿಸಿದ್ದಾರೆ.
‘ಬಾಂಗ್ಲಾ ಕ್ರಿಕೆಟಿಗರು ಅಲ್ಲಿನ ಹಿಂದೂಗಳ ಸುರಕ್ಷತೆ ಬಗ್ಗೆ ಧ್ವನಿ ಎತ್ತಬೇಕು’ ಎಂದು ಪ್ರಸಿದ್ಧ ಕಥಾವಾಚಕ ಧೀರೇಂದ್ರ ಶಾಸ್ತ್ರಿ ಅವರು ಆಗ್ರಹಿಸಿದ್ದಾರೆ.
‘ಅವನು ನಾಯಕನಲ್ಲ, ಅವನಿಗೆ ಆ ಗುಣಗಳಿಲ್ಲ’ ಎಂದು ಪ್ರಸಿದ್ಧ ಯತಿ ಸ್ವಾಮಿ ರಾಮಭದ್ರಾಚಾರ್ಯ ಅವರು ಶಾರುಕ್ ಅವರನ್ನು ಟೀಕಿಸಿದ್ದಾರೆ.
‘ಜನರಿಂದಾಗಿ ಶಾರುಕ್ ಖಾನ್‌ಗೆ ಖ್ಯಾತಿ ಬಂದಿದೆ. ಜನರ ಭಾವನೆಗಳನ್ನು ಅವರು ಗೌರವಿಸಬೇಕು’ ಎಂದು ಅಖಿಲ ಭಾರತೀಯ ಆಖಾಡ ಪರಿಷತ್ ಅಧ್ಯಕ್ಷ ಮಹಾಂತ್ ರವೀಂದ್ರ ಪುರಿ ಅವರು ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸಂತ ದಿನೇಶ್ ಫಲಹಾರಿ ಮಹಾರಾಜ್ ಅವರು, ’ಶಾರುಕ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಅವರನ್ನು ಬಾಂಗ್ಲಾಕ್ಕೆ ಕಳುಹಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಇದೇ ಕಾರಣಕ್ಕೆ ಬಿಜೆಪಿ ಹಿರಿಯ ನಾಯಕ, ಶಾಸಕ ಸಂಗೀತ್ ಸೋಮ್ ಅವರು ಶಾರುಕ್ ಖಾನ್ ಅವರನ್ನು ‘ದೇಶದ್ರೋಹಿ’ ಎಂದು ಇತ್ತೀಚೆಗೆ ಕರೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.