ADVERTISEMENT

ಬ್ಲೈಂಡ್‌ ಹಿಂದಿ ರಿಮೇಕ್‌ನಲ್ಲಿ ಸೋನಂ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 3:04 IST
Last Updated 1 ಜೂನ್ 2020, 3:04 IST
ಸೋನಂ ಕಪೂರ್‌
ಸೋನಂ ಕಪೂರ್‌   

ಕೊರಿಯನ್‌ ಭಾಷೆಯ ಜನಪ್ರಿಯ ಸಿನಿಮಾ ‘ಬ್ಲೈಂಡ್‌’ ಬಾಲಿವುಡ್‌ನಲ್ಲಿ ತಯಾರಾಗುತ್ತಿದೆ. ಈ ರಿಮೇಕ್‌ ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ನಟಿ ಸೋನಂ ಕಪೂರ್‌ ಅಭಿನಯಿಸಲಿದ್ದಾರೆ. ಸದ್ಯ ಲಾಕ್‌ಡೌನ್‌ ಅವಧಿಯಲ್ಲಿ ಪತಿ ಆನಂದ್‌ ಅಹುಜಾ ಹಾಗೂ ಅತ್ತೆ ಜೊತೆ ದೆಹಲಿಯಲ್ಲಿರುವ ಸೋನಂ, ಚಿತ್ರೀಕರಣಕ್ಕೆ ಅನುಮತಿ ಸಿಕ್ಕಿದ ಕೂಡಲೇ ತಮ್ಮ ಮುಂದಿನ ಚಿತ್ರ ‘ಬ್ಲೈಂಡ್’‌ ಚಿತ್ರದ ಹಿಂದಿ ರಿಮೇಕ್‌ನಲ್ಲಿ ತೊಡಗಿಕೊಳ್ಳಲಿದ್ದಾರೆ.

ಈ ಕೊರಿಯನ್‌ ಸಿನಿಮಾವನ್ನು ಹಿಂದಿಯಲ್ಲಿ ನಿರ್ದೇಶನ ಮಾಡುತ್ತಿರುವವರು ಶೋಮೆ ಮಖಿಜಾ. ಸುಜಯ್‌ ಘೋಷ್ ‌ಅವರು ಈ ಚಿತ್ರದ ಕ್ರಿಯೇಟಿವ್‌ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ.

2011ರಲ್ಲಿ ಬಿಡುಗಡೆಯಾಗಿರುವ ದಕ್ಷಿಣ ಕೊರಿಯನ್‌ ಕ್ರೈಂ ಥ್ರಿಲ್ಲರ್‌ ಸಿನಿಮಾ ‘ಬ್ಲೈಂಡ್‌’.ಇದನ್ನು ಆನ್‌–ಸಂಗ್‌– ಹೂನ್‌ ಅವರು ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ಮುಖ್ಯಪಾತ್ರದಲ್ಲಿ ಕಿಮ್‌ ಹನೀಲ್‌ ಹಾಗೂ ಯೂ ಸಿಯಂಗ್ ಹೊ ನಟಿಸಿದ್ದರು. ಈ ಚಿತ್ರದ ಅಭಿನಯಕ್ಕಾಗಿ ನಾಯಕಿಕಿಮ್‌ ಹನೀಲ್‌ಗೆ 32ನೇ ಬ್ಲ್ಯೂ ಡ್ರಾಗನ್‌ ಫಿಲ್ಮ್‌ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.ಕಾಣೆಯಾದ ವ್ಯಕ್ತಿಯ ಪ್ರಕರಣದ ಸುತ್ತ ಸುತ್ತುವ ಕ್ರೈಂ ಥ್ರಿಲ್ಲರ್ ಸಿನಿಮಾವಿದು.

ADVERTISEMENT

ಇದರಲ್ಲಿ ಕಿಮ್‌ ಹನೀಲ್‌ ನಿರ್ವಹಿಸಿದ, ಕಣ್ಣು ಕಾಣದ ಯುವತಿ ಪಾತ್ರದಲ್ಲಿ ಸೋನಂ ಕಪೂರ್‌ ನಟಿಸಲಿದ್ದಾರೆ. ‘ಈ ಸಿನಿಮಾದಲ್ಲಿ ಕೆಲಸ ಮಾಡಲು ನಾನು ಉತ್ಸುಕಳಾಗಿದ್ದೇನೆ. ಚಿತ್ರೀಕರಣ ಆರಂಭವನ್ನು ಎದುರು ನೋಡುತ್ತಿದ್ದೇನೆ’ ಎಂದು ಸೋನಂ ಹೇಳಿದ್ದಾರೆ.

‘ಬ್ಲೈಂಡ್‌’ ಸಿನಿಮಾವನ್ನು ತಮಿಳಿಗೆ ಈಗಾಗಲೇ ರಿಮೇಕ್‌ ಆಗಿದ್ದು, ನಟಿ ನಯನತಾರಾ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.