ADVERTISEMENT

ನಟ ಅಮಿತಾಬ್‌ ಬಚ್ಚನ್‌ಗೆ ಶಸ್ತ್ರಚಿಕಿತ್ಸೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಫೆಬ್ರುವರಿ 2021, 2:35 IST
Last Updated 28 ಫೆಬ್ರುವರಿ 2021, 2:35 IST
ನಟ ಅಮಿತಾಬ್‌ ಬಚ್ಚನ್‌
ನಟ ಅಮಿತಾಬ್‌ ಬಚ್ಚನ್‌   

ಮುಂಬೈ: ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದಾಗಿ ಶನಿವಾರ ಮಾಹಿತಿ ಹಂಚಿಕೊಂಡಿದ್ದಾರೆ.

78 ವರ್ಷ ವಯೋಮಾನದ ಅಮಿತಾಬ್‌ ಬ್ಲಾಗ್‌ ಬರಹಗಳು ಹಾಗೂ ಟ್ವೀಟ್‌ ಮಾಡುವುದರಲ್ಲಿ ಸಕ್ರಿಯರಾಗಿದ್ದು, 'ಆರೋಗ್ಯ ಸ್ಥಿತಿಯಲ್ಲಿ ವ್ಯತ್ಯಯವಾಗಿದೆ...ಶಸ್ತ್ರಚಿಕಿತ್ಸೆ...ಬರೆಯಲು ಸಾಧ್ಯವಾಗುತ್ತಿಲ್ಲ...' ಎಂದು ತಮ್ಮ ಬ್ಲಾಗ್‌ನಲ್ಲಿ ಪ್ರಕಟಿಸಿದ್ದಾರೆ.

ಟ್ವಿಟರ್‌ನಲ್ಲಿ ಆಶ್ಚರ್ಯ ಸೂಚಕ ಮತ್ತು ಪ್ರಶ್ನಾರ್ಥಕ ಚಿಹ್ನೆಯನ್ನಷ್ಟೇ ಹಾಕಿದ್ದಾರೆ.

ADVERTISEMENT

ಕೋವಿಡ್‌ಗೆ ಬಹಳ ದಿನಗಳವರೆಗೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆಗೆ ಪಡೆದು ಮತ್ತೆ ಚಿತ್ರೀಕರಣಗಳಲ್ಲಿ ಅಮಿತಾಬ್‌ ಭಾಗಿಯಾಗಿದ್ದರು. ವಿಕಾಸ್‌ ಬಾಹ್ಲ್‌ ಅವರ ಮುಂದಿನ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿರುವುದಾಗಿಯೂ ತಿಳಿಸಿದ್ದರು.

ಅಮಿತಾಬ್‌ ಅಭಿನಯದ ಚೆಹರೆ ಏಪ್ರಿಲ್‌ 30ರಂದು ಬಿಡುಗಡೆಯಾಗಲಿದೆ ಹಾಗೂ ಕ್ರೀಡಾ ಕಥೆಯನ್ನು ಆಧರಿಸಿದ 'ಝುಂಡ್‌' (Jhund) ಸಿನಿಮಾ ಜೂನ್‌ 18ರಂದು ತೆರೆ ಕಾಣಲು ಸಿದ್ಧತೆ ನಡೆಸಿದೆ.

ಅಮಿತಾಬ್‌ ಅವರ ಬ್ಲಾಗ್‌ ಬರಹ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.