ADVERTISEMENT

'ಸೂರ್ಯವಂಶಿ' ಖ್ಯಾತಿಯ ಬಾಲಿವುಡ್‌ ನಟ ಆಶಿಶ್ ವಾರಂಗ್ ನಿಧನ

ಏಜೆನ್ಸೀಸ್
Published 6 ಸೆಪ್ಟೆಂಬರ್ 2025, 6:59 IST
Last Updated 6 ಸೆಪ್ಟೆಂಬರ್ 2025, 6:59 IST
<div class="paragraphs"><p>ಆಶಿಶ್ ವಾರಂಗ್ </p></div>

ಆಶಿಶ್ ವಾರಂಗ್

   

ಬೆಂಗಳೂರು: ಮರಾಠಿ, ಬಾಲಿವುಡ್‌ ಸಿನಿಮಾಗಳಲ್ಲಿ ಸಕ್ರಿಯರಾಗಿ ನಟಿಸುತ್ತಿದ್ದ, ದೃಶ್ಯಂ, ಸೂರ್ಯವಂಶಿ ಖ್ಯಾತಿಯ ನಟ ಆಶಿಶ್ ವಾರಂಗ್ ನಿಧನರಾಗಿದ್ದಾರೆ.

ಅವರಿಗೆ 55 ವರ್ಷ ವಯಸ್ಸಾಗಿತ್ತು. 

ADVERTISEMENT

ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಶುಕ್ರವಾರ ಸಂಜೆ ನಿಧನರಾದರು ಎಂದು ಅವರ ಆಪ್ತರು ಖಚಿತಪಡಿಸಿದ್ದಾರೆ.

ಆಶಿಶ್ ವಾರಂಗ್ ನಿಧನ ಅವರ ಅಭಿಮಾನಿಗಳು ಹಾಗೂ ಚಿತ್ರರಂಗಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದೆ ಎಂದು ಬಾಲಿವುಡ್‌ನ ಹಲವರು ಪ್ರತಿಕ್ರಿಯಿಸಿದ್ದಾರೆ. 

ಆಶಿಶ್ ಚಿತ್ರರಂಗ ಪ್ರವೇಶಿಸುವ ಮೊದಲು, ಭಾರತೀಯ ವಾಯುಪಡೆಯಲ್ಲಿ ಅಧಿಕಾರಿಯಾಗಿ ಕೆಲಸ ಮಾಡಿದ್ದರು. ನಂತರ ಸಿನಿಮಾರಂಗಕ್ಕೆ ಬಂದು ಪೋಷಕ ಪಾತ್ರಗಳ ಮೂಲಕ ಗಮನ ಸೆಳೆದರು. 

ಸೂರ್ಯವಂಶಿ, ದೃಶ್ಯಂ, ಮರ್ದಾನಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಕೆಲಸ ಮಾಡಿದ್ದಾರೆ.  ‘ಏಕ್ ವಿಲನ್ ರಿಟರ್ನ್ಸ್’, ಹಾಗೂ ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸರಣಿಗಳಲ್ಲಿ ಅವರು ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.