ಮುಕುಲ್ ದೇವ್ ಅವರು ಉಪೇಂದ್ರ ಜೊತೆ ‘ರಜನಿ’ ಸಿನಿಮಾದಲ್ಲಿ ಖಳನಟನಾಗಿ ನಟಿಸಿದ್ದರು
ಮುಂಬೈ: ಬಾಲಿವುಡ್ ನಟ ಮುಕುಲ್ ದೇವ್ ಅವರು ಶನಿವಾರ ನಿಧನರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮುಕುಲ್ ದೇವ್ ಅವರಿಗೆ 54 ವರ್ಷ ವಯಸ್ಸಾಗಿತ್ತು. ಮುಕುಲ್ ಅವರು ‘ಸನ್ ಆಫ್ ಸರ್ದಾರ್’, ‘ಆರ್... ರಾಜ್‌ಕುಮಾರ್’, ‘ಜೈ ಹೋ’ ಸೇರಿದಂತೆ ಹಲವು ಹಿಂದಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಮುಕುಲ್ ದೇವ್ ಅವರು ನಟ ಹಾಗೂ ಮಾಡೇಲ್ ರಾಹುಲ್ ದೇವ್ ಅವರ ಸಹೋದರರಾಗಿದ್ದಾರೆ. ಮುಕುಲ್ ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಬಾಲಿವುಡ್ ನಟಿ ದೀಪ್ಶಿಖಾ ನಾಗ್ಪಾಲ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಮುಕುಲ್ ದೇವ್ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿದ್ದು, ಸಂತಾಪ ಸೂಚಿಸಿದ್ದಾರೆ.
ಮುಕುಲ್ ದೇವ್ ಕನ್ನಡದ ಉಪೇಂದ್ರ ನಟನೆಯ ‘ರಜನಿ’ ಸಿನಿಮಾದಲ್ಲಿ ಖಳನಟನಾಗಿ ಅಭಿನಯಿಸಿ ಗಮನ ಸೆಳೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.