ಅಬುಧಾಬಿ (ಯುಎಇ): ಅಬುಧಾಬಿಯಲ್ಲಿ ಈ ವರ್ಷದ ಇಂಟರ್ ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ (ಐಐಎಫ್ಎ) ಪ್ರಶಸ್ತಿಗಳಿಗೆ ವೇದಿಕೆ ಸಿದ್ಧವಾಗಿದೆ.
ಭಾರತೀಯ ಉಪಖಂಡದ ಆಚೆಗೆ ಭಾರತೀಯ ಸಿನಿಮಾವನ್ನು ಉತ್ತೇಜಿಸುವುದು ಮತ್ತು ಚಲನಚಿತ್ರ ತಾರೆಯರು ಮತ್ತು ಜಗತ್ತಿನಾದ್ಯಂತ ವಾಸಿಸುವ ಹಲವಾರು ಅನಿವಾಸಿ ಭಾರತೀಯರ ನಡುವೆ ನೇರ ಸಂಪರ್ಕವನ್ನು ಸ್ಥಾಪಿಸಲು ವೇದಿಕೆಯನ್ನು ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಸ್ಟೈಲ್ ಸ್ಟೇಟ್ಮೆಂಟ್ ಯಾವಾಗಲೂ ಗಮನ ಸೆಳೆಯುತ್ತದೆ. ಪ್ರಸುತ್ತ IIFA 2023 ರಲ್ಲಿ ಭಾಗವಹಿಸಲು ಅಬುಧಾಬಿಯಲ್ಲಿದ್ದು, ಅವರ ಹೊಸ ಗಡ್ಡದ ಲುಕ್ ಎಲ್ಲರ ಗಮನ ಸೆಳೆದಿದೆ.
‘ದಬಾಂಗ್’ ಸ್ಟಾರ್ ಸದ್ಯ ಅಚ್ಚುಕಟ್ಟಾಗಿ ಗಡ್ಡವನ್ನು ಫ್ರೆಂಚ್ ಕಟ್ ಮಾಡಿಸಿಕೊಂಡಿದ್ದು, ಅಬುಧಾಬಿಯಿಂದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಸಲ್ಮಾನ್ ಹೊಸ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ಸಲ್ಮಾನ್ ಖಾನ್ ಮೆರೂನ್ ಶರ್ಟ್ ಮತ್ತು ಕಪ್ಪು ಪ್ಯಾಂಟ್ನಲ್ಲಿ ಮಿಂಚಿದ್ದು, ಅವರ ಕಪ್ಪು ಕನ್ನಡಕ ಇನ್ನಷ್ಟು ಮೆರುಗು ನೀಡಿದೆ. ಇದರ ಜೊತೆಗೆ ಸಲ್ಮಾನ್ ಎಂದಿನಂತೆ ತಮ್ಮ ಕೈಕಡಗ ಧರಿಸುವುದನ್ನು ಮರೆತಿಲ್ಲ.
ಸಲ್ಮಾನ್, ಅವರ ಪೋಸ್ಟ್ಗಳ ಅಡಿಯಲ್ಲಿ ‘IIFA ಅಬುಧಾಬಿ #IIFA2023 @iifa’ ಎಂದು ಬರೆಯಲಾಗಿದೆ.
ಸಲ್ಮಾನ್ ಹೊಸ ಲುಕ್ ಅಭಿಮಾನಿಗಳಿಗೆ ಅವರ ‘ಕಿಕ್’ ಚಿತ್ರವನ್ನು ನೆನಪಿಸಿದೆ. ಆ ಚಿತ್ರದಲ್ಲಿಯೂ ಸಲ್ಲೂ ಭಾಯ್ ಫ್ರೆಂಚ್ ಗಡ್ಡದ ಲುಕ್ನಲ್ಲಿ ಕಾಣಿಸಿಕೊಂಡಿದ್ದರು. ’ಇದು ನನಗೆ ‘ಕಿಕ್’ ಚಿತ್ರವನ್ನು ನೆನಪಿಸುತ್ತಿದೆ. ಅದ್ಭುತವಾಗಿ ಕಾಣಿಸುತ್ತಿದ್ದೀರಿ ಭಾಯಿಜಾನ್’ ಎಂದು ಅಭಿಮಾನಿಯೊಬ್ಬ ಸಾಮಾಜಿಕ ಮಾಧ್ಯಮಗಳಲ್ಲಿ ಕಾಮೆಂಟ್ ಮಾಡಿದ್ದಾರೆ. ’ಕಿಕ್ 2 ಚಿತ್ರವನ್ನು ಈಗಲೇ ಮಾಡಬೇಕು’ ಎಂದು ಮತ್ತೊಬ್ಬರು ಬರೆದಿದ್ದಾರೆ.
ಮೇ 27 ರಂದು ನಡೆಯಲಿರುವ IIFA 2023ರಲ್ಲಿ ಈ ಭಾರಿ ಸಲ್ಮಾನ್ ಹೋಸ್ಟ್ ಮಾಡುವ ಬದಲು ಪ್ರದರ್ಶನ ನೀಡಲಿದ್ದಾರೆ.
ಸಲ್ಮಾನ್ ಖಾನ್ ಒಟಿಟಿಯಲ್ಲಿ (OTT) ಬಿಗ್ ಬಾಸ್ ಹೊಸ ಆವೃತ್ತಿಯೊಂದಿಗೆ ಚಲನಚಿತ್ರ ಮತ್ತು ಕಾರ್ಯಕ್ರಮಗಳತ್ತ ಹಿಂತಿರುಗಲು ಸಿದ್ಧರಾಗಿದ್ದಾರೆ. ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ ಒಟಿಟಿ ಎರಡನೇ ಆವೃತ್ತಿ ಪ್ರಾರಂಭವಾಗಲಿದೆ. ಶುಕ್ರವಾರ ಇದರ ಪ್ರೋಮೊ ಕೂಡ ಬಿಡುಗಡೆಯಾಗಿದೆ.
ಇದಲ್ಲದೆ, ಭಾಯಿಜಾನ್ ‘ಟೈಗರ್ –3’ ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ದೀಪಾವಳಿಗೆ ಬಿಡುಗಡೆಯಾಗಲಿದ್ದು, ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಕೂಡ ನಟಿಸಲಿದ್ದಾರೆ. ‘ಟೈಗರ್ –3’ ನಲ್ಲಿ, ಅಭಿಮಾನಿಗಳು ಶಾರುಖ್ ಖಾನ್ ಅವರನ್ನು ವಿಶೇಷ ಅತಿಥಿ ಪಾತ್ರದಲ್ಲಿ ನೋಡಬಹುದಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.