ADVERTISEMENT

ಪ್ರಿಯಕರನೊಂದಿಗಿನ ಸಂಬಂಧ ಕೊನೆಗೊಳಿಸಿದ ನಟಿ ಸುಷ್ಮಿತಾ ಸೇನ್

ಪಿಟಿಐ
Published 23 ಡಿಸೆಂಬರ್ 2021, 16:04 IST
Last Updated 23 ಡಿಸೆಂಬರ್ 2021, 16:04 IST
ನಟಿ ಸುಷ್ಮಿತಾ ಸೇನ್‌ ಮತ್ತು ರೋಹಮನ್ ಶಾಲ್
ನಟಿ ಸುಷ್ಮಿತಾ ಸೇನ್‌ ಮತ್ತು ರೋಹಮನ್ ಶಾಲ್   

ಮುಂಬೈ: ಭಾರತದ ಮೊದಲ 'ಭುವನ ಸುಂದರಿ', ಬಾಲಿವುಡ್‌ ನಟಿ ಸುಷ್ಮಿತಾ ಸೇನ್‌ ಅವರು ಪ್ರಿಯಕರ ರೋಹಮನ್ ಶಾಲ್ ಅವರೊಂದಿಗಿನ ಸಂಬಂಧ ಕಡಿದುಕೊಂಡಿದ್ದಾರೆ. ಆ ಬಗ್ಗೆ ಸ್ವತಃ ಸುಷ್ಮಿತಾ ಗುರುವಾರ ಬಹಿರಂಗ ಪಡಿಸಿದ್ದಾರೆ.

ಸುಮಾರು ಮೂರು ವರ್ಷಗಳಿಂದ ಸುಷ್ಮಿತಾ (46) ಮತ್ತು ರೋಹಮನ್‌ (31) ಸಂಬಂಧ ಬೆಳೆಸಿದ್ದರು. ಆದರೆ, ಇಬ್ಬರೂ ಬೇರೆಯಾಗಿರುವ ಬಗ್ಗೆ ಗಾಳಿ ಸುದ್ದಿಯೂ ಹಬ್ಬಿತ್ತು. ಇದೀಗ ಸುಷ್ಮಿತಾ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ರೋಹಮನ್‌ ಜೊತೆಗಿರುವ ಚಿತ್ರ ಪ್ರಕಟಿಸಿರುವ ಅವರು, ನಾವು ಗೆಳೆಯರಾಗಿ ಮುಂದುವರಿಯಲಿದ್ದೇವೆ ಎಂದಿದ್ದಾರೆ.

ADVERTISEMENT

'ನಮ್ಮ ನಡುವೆ ಸ್ನೇಹವು ಮೊದಲಾಯಿತು, ನಾವು ಸ್ನೇಹಿತರಾಗಿಯೇ ಇರುತ್ತೇವೆ! ಸಂಬಂಧ ದೂರವಾಗಿದೆ...ಪ್ರೀತಿ ಉಳಿದಿದೆ!! ಇನ್ನಾವುದೇ ಊಹಾಪೋಹಗಳೂ ಬೇಡ, ಬದುಕಿ ಮತ್ತು ಬದುಕಲು ಬಿಡಿ....' ಎಂದು ಪ್ರಕಟಿಸಿದ್ದಾರೆ.

ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ರೋಹಮನ್‌ ಸಹ ಇದೇ ಪೋಸ್ಟ್‌ ಹಂಚಿಕೊಂಡಿದ್ದಾರೆ.

ಸುಷ್ಮಿತಾ ಸೇನ್‌ ಅವರು 2000ರಲ್ಲಿ ರೀನಿ ಹೆಸರಿನ ಹೆಣ್ಣು ಮಗು ದತ್ತು ಪಡೆದರೆ, 2010ರಿಂದ ಅಲಿಶಾ ಎರಡನೇ ಮಗಳಾಗಿ ಬೆಳೆಯುತ್ತಿದ್ದಾಳೆ. ಹೈದರಾಬಾದ್‌ನಲ್ಲಿ ನೆಲೆಸಿದ್ದ ಬಂಗಾಳಿ ಕುಟುಂಬದಲ್ಲಿ ಜನಿಸಿದ ಸುಷ್ಮಿತಾ ಅವರು, 1994ರಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ, ಜಗತ್ತಿನ ಗಮನ ಸೆಳೆದಿದ್ದರು. ಆಗ ಅವರ ವಯಸ್ಸು 18 ವರ್ಷ.

ಬೀವಿ ನಂಬರ್‌ 1, ಆಂಖೆ, ಫಿಲ್ಹಾಲ್‌, ಸಮಯ್‌, ಮೇನೆ ಪ್ಯಾರ್‌ ಕ್ಯೋ ಕಿಯಾ ಹಾಗೂ ಮೇ ಹೂಂ ನಾ,...ಸೇರಿದಂತೆ ಹಲವು ಸಿನಿಮಾಗಳಲ್ಲಿ ಸುಷ್ಮಿತಾ ನಟಿಸಿದ್ದಾರೆ. ಡಿಸ್ನಿ+ಹಾಟ್‌ಸ್ಟಾರ್‌ ಒಟಿಟಿಯಲ್ಲಿ ಬಿಡುಗಡೆಯಾಗಿರುವ 'ಆರ್ಯನ್‌' ಸೀರೀಸ್‌ನಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.