ADVERTISEMENT

ಮತ್ತೊಂದು ಹಾಟ್ ಫೋಟೊ ವೈರಲ್‌: ತಾವೇ ಮೇಕಪ್‌ ಮಾಡಿಕೊಂಡ ದಿಶಾ ಪಟಾನಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಏಪ್ರಿಲ್ 2022, 7:08 IST
Last Updated 5 ಏಪ್ರಿಲ್ 2022, 7:08 IST
ದಿಶಾ ಪಟಾನಿ (ಇನ್‌ಸ್ಟಾಗ್ರಾಂ ಚಿತ್ರ)
ದಿಶಾ ಪಟಾನಿ (ಇನ್‌ಸ್ಟಾಗ್ರಾಂ ಚಿತ್ರ)   

ನವದೆಹಲಿ: ಇಂಟರ್ನೆಟ್‌ನಲ್ಲಿ ತಮ್ಮ ಮಾದಕ ಭಂಗಿಗಳ ಮೂಲಕ ನಟಿ ದಿಶಾ ಪಟಾನಿ ನೋಡುಗರ ಎದೆಯಲ್ಲಿ ಕಿಚ್ಚು ಹಚ್ಚುವ ಕಲೆಯನ್ನು ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಾರೆ. ಸೋಮವಾರ ದಿಶಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರ ಇದಕ್ಕೆ ಹೊಸ ಉದಾಹರಣೆ.

ಈ ಬಾರಿ ದಿಶಾ ಹಂಚಿಕೊಂಡಿರುವ ಚಿತ್ರ ಬೀಚ್ ಡೈರಿ ಅಥವಾ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವುದಲ್ಲ. ಆದರೆ, ಚಿತ್ರವು ಗ್ಲಾಮರಸ್ ಆಗಿದೆ. ಅಭಿಮಾನಿಗಳು ಕೇವಲ ಮೇಕಪ್ ಮತ್ತು ಕೂದಲನ್ನು ನೋಡಬೇಕೆಂದು ದಿಶಾ ಬಯಸಿದ್ದಾರೆ. ‘ನನ್ನಿಂದ ಮೇಕಪ್ ಮತ್ತು ಕೇಶ ವಿನ್ಯಾಸ’ ಎಂದು ದಿಶಾ ಬರೆದುಕೊಂಡಿದ್ದಾರೆ.

ಸದ್ಯ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಅಭಿಮಾನಿಗಳು ವಾವ್ಹ್, ಅದ್ಭುತ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

ದಿಶಾಗೆ ದೊಡ್ಡ ಅಭಿಮಾನಿ ಬಳಗವಿದೆ. ಫಿಟ್‌ನೆಸ್‌ಗೆ ಹೆಚ್ಚು ಒತ್ತು ನೀಡುವ ಅವರು ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೊ ಮತ್ತು ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ದಿಶಾ ಪಟಾನಿ ಅವರು ‘ಏಕ್ ವಿಲನ್‌ –2’ ಸಿನಿಮಾದಲ್ಲಿ ಅರ್ಜುನ್ ಕಪೂರ್ ಮತ್ತು ಜಾನ್ ಅಬ್ರಹಾಂ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ.

ಇತ್ತೀಚೆಗೆ ದಿಶಾಳ ಹೆಸರು ನಟ ಟೈಗರ್ ಶ್ರಾಫ್ ಜತೆಗೆ ಕೇಳಿಬಂದಿತ್ತು. ಇಬ್ಬರೂ ಜತೆಯಾಗಿ ಮಾಲ್ಡೀವ್ಸ್‌ನ ಬೀಚ್‌ಗಳಲ್ಲಿ ಕಾಲ ಕಳೆದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.