ಅಮೆರಿಕ ಹಾಗೂ ಇಸ್ರೇಲ್ ಜಂಟಿ ಕಾರ್ಯಚರಣೆಯಲ್ಲಿ ಇರಾನ್‌ನ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರು ಮೃತರಾಗಿದ್ದಾರೆ. ಇರಾನ್‌ನಲ್ಲಿ ಖಮೇನಿ ಸಾವಿಗೆ ಶೋಕಾಚರಣೆ ಮಾಡುತ್ತಿದ್ದರೆ, ಬಾಲಿವುಡ್ ನಟಿ ಎಲ್ನಾಜ್ ನೊರೌಜಿ ಅವರು ಸಂಭ್ರಮಿಸಿದ್ದಾರೆ.
ಈ ಕುರಿತು ಎಲ್ನಾಜ್ ನೊರೌಜಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
‘ಖಮೇನಿ ಅವರು ಕಳೆದ 35 ವರ್ಷಗಳಿಂದ ಸಾವಿರಾರು ಅಮೆರಿಕನ್ನರನ್ನು ಕೊಂದ ಸಶಸ್ತ್ರ ಗುಂಪುಗಳಿಗೆ ಧನಸಹಾಯ ಮಾಡುತ್ತಿದ್ದರು. ಉಕ್ರೇನ್ ಮತ್ತು ರಷ್ಯಾ ಯುದ್ಧದ ಸಂದರ್ಭದಲ್ಲಿ ಉಕ್ರೇನ್ ನಾಗರಿಕರ ಮೇಲೆ ಬಾಂಬ್ ದಾಳಿ ನಡೆಸಲು ಅವರು ರಷ್ಯಾಕ್ಕೆ ಸಾವಿರಾರು ಡ್ರೋನ್‌ಗಳನ್ನು ಪೂರೈಸಿದ್ದರು. ಆದರೂ, ಎಡಪಂಥೀಯರು ಅವರ ಸಾವಿಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ’ ಎಂದು ಹೇಳಿಕೊಂಡಿದ್ದಾರೆ.
‘ಅಸ್ಸಾದ್ ಸಿರಿಯಾದ ಮಕ್ಕಳ ಮೇಲೆ ರಾಸಾಯನಿಕ ಅಸ್ತ್ರಗಳನ್ನು ಬಳಸಿ ವಿಷಪೂರಿತ ಅನಿಲ ದಾಳಿ ನಡೆಸುತ್ತಿದ್ದಾಗ, ಖಮೇನಿ ಅವರಿಗೆ ಹಣಕಾಸಿನ ನೆರವು ನೀಡಿದ್ದರು. ಮಹಿಳೆಯರ ತಲೆ ಕೂದಲು ಕಾಣಿಸಿತ್ತು ಎಂಬ ಕಾರಣಕ್ಕಾಗಿ ಅವರಿಗೆ ಪೊಲೀಸರಿಂದ ಹೊಡೆಸಿ ಕೊಲ್ಲಿಸಿದ್ದರು. ಅಷ್ಟೆ ಅಲ್ಲದೆ, ಬಾಲಕಿಯರು ತಪ್ಪು ಮಾಡಿದರೆ ಅವರನ್ನು ಗಲ್ಲಿಗೇರಿಸುವ ಮೊದಲು ಅವರನ್ನು ಅತ್ಯಾಚಾರ ಮಾಡಲಾಗುತ್ತಿತ್ತು. ಖಮೇನಿ ಅವರು ಇಷ್ಟು ಕ್ರೂರಿಯಾದರೂ ಅವರ ಸಾವಿಗೆ ಅನೇಕರು ದುಖಿಃಸುತ್ತಿದ್ದಾರೆ’ ಎಂದು ಎಲ್ನಾಜ್ ನೊರೌಜಿ ಬರೆದುಕೊಂಡಿದ್ದಾರೆ.
ಎಲ್ನಾಜ್ ನೊರೌಜಿ ಅವರು ಮತ್ತೊಂದು ವಿಡಿಯೊ ಹಂಚಿಕೊಂಡಿದ್ದು, ಅದರಲ್ಲಿ ಅಮೆರಿಕ ಹಾಗೂ ಇರಾನ್‌ನ ಜನರು ಧ್ವಜ ಹಿಡಿದುಕೊಂಡು ಸಂಭ್ರಮಿಸುವ ದೃಶ್ಯಗಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.