ADVERTISEMENT

ಕೋವಿಡ್‌ನಿಂದ ಚೇತರಿಸಿಕೊಂಡ ಕರೀನಾ ಕಪೂರ್

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2021, 13:35 IST
Last Updated 24 ಡಿಸೆಂಬರ್ 2021, 13:35 IST
ಕರೀನಾ ಕಪೂರ್‌ ಖಾನ್
ಕರೀನಾ ಕಪೂರ್‌ ಖಾನ್   

ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್‌ ಖಾನ್ ಅವರು ಕೋವಿಡ್–19 ನಿಂದ ಗುಣಮುಖರಾಗಿದ್ದಾರೆ. ಈ ವಿಚಾರವನ್ನು ಸ್ವತಃ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ತಿಳಿಸಿದ್ದಾರೆ.

ಇನ್‌ಸ್ಟಾ ಸ್ಟೋರಿಯಲ್ಲಿ,'ನನ್ನ ಕೋವಿಡ್–19 ಪರೀಕ್ಷಾ ವರದಿ ನೆಗೆಟಿವ್ ಬಂದಿದೆ' ಎಂದು ಬರೆದುಕೊಂಡಿರುವ ನಟಿ, ಸ್ನೇಹಿತರು, ವೈದ್ಯಕೀಯ ಸಿಬ್ಬಂದಿ, ಕುಟುಂಬದವರು ಮತ್ತು ಅಭಿಮಾನಿಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ.

ನಿರಂತರವಾಗಿ ನೆರವಾದ ಬೃಹನ್‌ಮುಂಬೈ ಮಹಾನಗರ ಪಾಲಿಕೆಗೂ ಕೃತಜ್ಞತೆ ತಿಳಿಸಿದ್ದಾರೆ.

ADVERTISEMENT

ಕರೀನಾ ಅವರಿಗೆ ಡಿಸೆಂಬರ್ 13 ರಂದು ಸೋಂಕು ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಕರೀನಾ ಅವರ ಆತ್ಮೀಯ ಗೆಳತಿ ಮತ್ತು ನಟಿ ಅಮೃತಾ ಅರೋರಾ ಅವರೂ ಸೋಂಕು ತಗುಲಿರುವುದಾಗಿ ಪ್ರಕಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.