ಸಂಗೀತಾ ಬಿಜಲಾನಿ, -ಚಿತ್ರ: ಪಿ.ಎಸ್. ಕೃಷ್ಣಕುಮಾರ್
ಪುಣೆ: ಬಾಲಿವುಡ್ ನಟಿ ಸಂಗೀತಾ ಬಿಜಲಾನಿ ಅವರ ತೋಟದ ಮನೆಯಲ್ಲಿ ಕಳ್ಳತನವಾಗಿದ್ದು ಮನೆಯಲ್ಲಿದ್ದ ವಸ್ತುಗಳನ್ನು ಧ್ವಂಸ ಮಾಡಲಾಗಿದೆ.
ಮಾವಲ್ ಜಿಲ್ಲೆಯ ಲೋನಾವಾಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಶುಕ್ರವಾರ ಸಹಾಯಕರೊಂದಿಗೆ ಫಾರ್ಮ್‌ಹೌಸ್‌ಗೆ ಬಂದಾಗ, ಮನೆಯ ಮುಖ್ಯ ಬಾಗಿಲು ಮುರಿದು ಹೋಗಿತ್ತು, ಕಿಟಿಕಿಯ ಗ್ರಿಲ್‌ಗಳು ತುಂಡಾಗಿದ್ದವು, ಟಿ.ವಿ ಹಾಗೂ ಫ್ರಿಡ್ಜ್ ಕಳ್ಳತನವಾಗಿತ್ತು. ಹಾಸಿಗೆ, ಸೋಪಾ, ಕುರ್ಚಿಗಳು ಹಾಗೂ ಮನೆ ಬಳಕೆಯ ವಸ್ತುಗಳು ಚಲ್ಲಾಪಿಲ್ಲಿಯಾಗಿದ್ದವು, ಸುಮಾರು ₹ 5 ಲಕ್ಷ ಮೌಲ್ಯದ ವಸ್ತುಗಳು ಕಳ್ಳತನವಾಗಿವೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಮೌಲ್ಯಮಾಪನಕ್ಕಾಗಿ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಪೊಲೀಸ್ ಇನ್ಸ್‌ಪೆಕ್ಟರ್ ದಿನೇಶ್ ತಾಯ್ಡೆ ತಿಳಿಸಿದ್ದಾರೆ.
80 ಮತ್ತು 90ರ ದಶಕಗಳಲ್ಲಿ ಸಂಗೀತಾ ಬಿಜಲಾನಿ ಬಾಲಿವುಡ್‌ನ ಜನಪ್ರಿಯ ನಟಿಯಾಗಿದ್ದರು. ತ್ರಿವೇಣಿ, ಹತ್ಯಾರ್, ಯೋಧ ಮತ್ತು ಜುರ್ಮ್ ಇವರ ಜನಪ್ರಿಯ ಚಿತ್ರಗಳು. ಪ್ರಸ್ತುತ ಮುಂಬೈನಲ್ಲಿ ನೆಲೆಸಿರುವ ಅವರು ಸಾರ್ವಜನಿಕ ಜೀವನದಿಂದ ದೂರ ಉಳಿದಿದ್ದಾರೆ. ಪುಣೆಯಲ್ಲಿ ಅವರು ಫಾರ್ಮ್‌ಹೌಸ್ ಹೊಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.