ADVERTISEMENT

Bollywood Bits: ರಾವಣ ಯಶ್‌ಗೆ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2025, 0:18 IST
Last Updated 5 ಜುಲೈ 2025, 0:18 IST
ಯಶ್‌ 
ಯಶ್‌    

ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಬಹುಭಾಷಾ ಚಿತ್ರದ ಸಣ್ಣ ಟೀಸರ್ ಸದ್ದು ಮಾಡುತ್ತಿದೆ. ಅದರಲ್ಲಿ ಕನ್ನಡದ ನಟ ಯಶ್ ಅವರು ರಾವಣನ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ಗೆಟಪ್‌ ಕುರಿತು ಮೆಚ್ಚುಗೆ ಹರಿದಾಡತೊಡಗಿದೆ.

ರಣಬೀರ್ ಕಪೂರ್ ರಾಮನ ಪಾತ್ರಧಾರಿಯಾಗಿದ್ದು, ಸೀತಾ ಪಾತ್ರದಲ್ಲಿ ಸಾಯಿ ಪಲ್ಲವಿ ಅಭಿನಯಿಸುತ್ತಿದ್ದಾರೆ. ಹನುಮನಾಗಿ ಸನ್ನಿ ಡಿಯೋಲ್ ಬಣ್ಣ ಹಚ್ಚಿದ್ದಾರೆ. ಅದ್ದೂರಿ ವಿಎಫ್ಎಕ್ಸ್ ಬಳಸಿ ತಯಾರಾಗುತ್ತಿರುವ ದೊಡ್ಡ ಬಜೆಟ್‌ನ ಈ ಸಿನಿಮಾ, ರಾಮಾಯಣದ ಕಥನವನ್ನು ಹೊಸ ತಲೆಮಾರಿಗೆ ದೃಶ್ಯ ವೈಭವಗಳಿಂದ ಕಟ್ಟಿಕೊಡಲು ಸಜ್ಜಾಗಿದೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ ಈ ಯೋಜನೆಯನ್ನು ಮಹತ್ವಾಕಾಂಕ್ಷಿಯನ್ನಾಗಿಸಿಕೊಂಡಿದ್ದಾರೆ. ಒಂಬತ್ತು ನಗರಗಳಲ್ಲಿ ಅಭಿಮಾನಿಗಳಿಗೆ ಮೊದಲ ಟೀಸರ್ ತೋರಿಸಲು ದೊಡ್ಡ ಪರದೆಗಳನ್ನು ಅವರು ಹಾಕಿಸಿದ್ದರು. ನ್ಯೂಯಾರ್ಕ್‌ ನಗರದ ಟೈಮ್ಸ್‌ ಸ್ಕ್ವೇರ್‌ನಲ್ಲೂ ಅಂತಹ ಪರದೆ ಇದ್ದುದು ಈ ಸಿನಿಮಾ ಜಾಗತಿಕ ಮಾರುಕಟ್ಟೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿದೆ ಎನ್ನುವುದಕ್ಕೆ ನಿದರ್ಶನ.

ADVERTISEMENT

ಚಿತ್ರದ ಸಹ ನಿರ್ಮಾಪಕರಲ್ಲೂ ಒಬ್ಬರಾಗಿರುವ ಯಶ್ ‘ಟಾಕ್ಸಿಕ್’ ಜೊತೆಜೊತೆಗೇ ಈ ಯೋಜನೆಯ ಕುರಿತು ಕನಸುಗಳನ್ನು ಇಟ್ಟುಕೊಂಡಿದ್ದಾರೆ.

ಮೊದಲ ಟೀಸರ್ ನೋಡಿದ ಅನೇಕರು ಸಿನಿಮಾದ ವಿಎಫ್ಎಕ್ಸ್‌ ಗುಣಮಟ್ಟವನ್ನು ಶ್ಲಾಘಿಸಿದ್ದಾರೆ. ಡಿಎನ್ಇಜಿ ಹಾಗೂ ರೆಡಿಫೈನ್ ಸಂಸ್ಥೆಯು ಚಿತ್ರಕ್ಕೆ ವಿಎಫ್ಎಕ್ಸ್‌ ಪರಿಣಾಮ ದಕ್ಕಿಸಿಕೊಡುವ ಕೆಲಸ ಮಾಡುತ್ತಿವೆ. ಮುಂದಿನ ವರ್ಷ ಸಿನಿಮಾದ ಮೊದಲ ಭಾಗ ಹಾಗೂ ಅದರ ಮುಂದಿನ ವರ್ಷ ಎರಡನೇ ಭಾಗ ತೆರೆ ಕಾಣಲಿದೆ. ಎ.ಆರ್. ರೆಹಮಾನ್ ಸಂಗೀತ ನೀಡಿರುವುದು ಇನ್ನೊಂದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.