ADVERTISEMENT

ಬಾಲಿವುಡ್ ನಟ ಧರ್ಮೇಂದ್ರ ನಿಧನ: ರಾಹುಲ್ ಗಾಂಧಿ, ಚಂದ್ರಬಾಬು ನಾಯ್ಡು ಸಂತಾಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 24 ನವೆಂಬರ್ 2025, 13:06 IST
Last Updated 24 ನವೆಂಬರ್ 2025, 13:06 IST
   

ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅವರ ನಿಧನಕ್ಕೆ ರಾಹುಲ್ ಗಾಂಧಿ,  ಎನ್‌.ಚಂದ್ರಬಾಬು ನಾಯ್ಡು ಸೇರಿದಂತೆ ಅನೇಕರು ಸಾಮಾಜಿಕ ಮಾಧ್ಯಮದಲ್ಲಿ  ಸಂತಾಪ ಸೂಚಿಸಿದ್ದಾರೆ.

ನಟ ಧರ್ಮೇಂದ್ರ ಅವರಿಗೆ ಸಂತಾಪ ಸೂಚಿಸಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್‌.ಚಂದ್ರಬಾಬು ನಾಯ್ಡು , 'ತಮ್ಮ ನಟನೆ ಮೂಲಕ ಕೋಟ್ಯಂತರ ಜನರ ಹೃದಯ ಗೆದ್ದಿದ್ದರು. ಭಾರತೀಯ ಚಿತ್ರರಂಗಕ್ಕೆ ಇವರ ಕೊಡುಗೆ ಅಪಾರ' ಎಂದು ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.

ಧರ್ಮೇಂದ್ರ ಅವರನ್ನು ಕುರಿತು ರಾಹುಲ್ ಗಾಂಧಿ ಅವರು, 'ಧರ್ಮೇಂದ್ರ ಜಿ ಅವರ ನಿಧನದ ಸುದ್ದಿ ತೀವ್ರ ದುಃಖಕರವಾಗಿದೆ. ಭಾರತೀಯ ಕಲಾ ಜಗತ್ತಿಗೆ ತುಂಬಲಾರದ ನಷ್ಟವಾಗಿದೆ. ಸುಮಾರು ಏಳು ದಶಕಗಳ ಕಾಲ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದರು.  ಅವರ ಅಪ್ರತಿಮ ಕೊಡುಗೆಯನ್ನು ಯಾವಾಗಲೂ ಪ್ರೀತಿಯಿಂದ ಸ್ಮರಿಸುತ್ತೇವೆ' ಎಂದಿದ್ದಾರೆ.

ADVERTISEMENT

ಬಾಲಿವುಡ್‌ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರು, 'ಧರಂ ಸರ್, ಪರದೆಯ ಒಳಗೂ ಹೊರಗೂ ಅನೇಕ ವರ್ಷಗಳ ನೆನಪು ಬಿಟ್ಟು ಹೋಗಿದ್ದಿರಾ ಎಲ್ಲದಕ್ಕೂ ಧನ್ಯವಾದಗಳು‘ ಎಂದು ಬರೆದು ಹಿರಿಯ ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.