ADVERTISEMENT

Bollywood: ಸಂಜಯ್‌ ಲೀಲಾ ಬನ್ಸಾಲಿ ಜೊತೆ ರಣ್‌ಬೀರ್‌ ಸಿನಿಮಾ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 23:30 IST
Last Updated 29 ಸೆಪ್ಟೆಂಬರ್ 2025, 23:30 IST
<div class="paragraphs"><p>ರಣ್‌ಬೀರ್‌ ಕಪೂರ್‌ ಮತ್ತು&nbsp;ಆಲಿಯಾ ಭಟ್‌</p></div>

ರಣ್‌ಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌

   

ಹದಿನೆಂಟು ವರ್ಷಗಳ ಬಳಿಕ ಮತ್ತೊಮ್ಮೆ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಜೊತೆ ಸಿನಿಮಾವೊಂದನ್ನು ಮಾಡಲು ನಟ ರಣ್‌ಬೀರ್‌ ಕಪೂರ್ ಸಜ್ಜಾಗಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮ ನಟನೆಯ ಹಿಂದಿನ ಗುರು ಸಂಜಯ್‌ ಲೀಲಾ ಬನ್ಸಾಲಿ ಎಂದಿದ್ದಾರೆ ರಣ್‌ಬೀರ್‌. 

2007ರಲ್ಲಿ ತೆರೆಕಂಡಿದ್ದ ಬನ್ಸಾಲಿ ನಿರ್ದೇಶನದ ‘ಸಾವರಿಯಾ’ ಸಿನಿಮಾ ಮೂಲಕ ರಣ್‌ಬೀರ್‌ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಇದೀಗ ‘ಲವ್‌ ಆ್ಯಂಡ್‌ ವಾರ್‌’ ಎನ್ನುವ ಸಿನಿಮಾದಲ್ಲಿ ರಣ್‌ಬೀರ್‌ಗೆ ಬನ್ಸಾಲಿ ಮತ್ತೊಮ್ಮೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಸಿನಿಮಾ ಕುರಿತು ತಮ್ಮ ಜನ್ಮದಿನದಂದು ಮಾಹಿತಿ ನೀಡಿರುವ ರಣ್‌ಬೀರ್‌, ‘ಸಿನಿಮಾ ಕುರಿತ ಎಲ್ಲಾ ವಿಷಯಗಳನ್ನು ಕಲಿಸಿದ ಗುರು ನಿರ್ದೇಶಕ ಬನ್ಸಾಲಿ. ಆಗಲೂ ಅವರೊಬ್ಬ ಮಾಸ್ಟರ್. ಇಂದು ಅದಕ್ಕಿಂತ ದೊಡ್ಡ ಮಾಸ್ಟರ್‌’ ಎಂದಿದ್ದಾರೆ. ಈ ಸಿನಿಮಾ 2026ರ ಮಾರ್ಚ್‌ 20ರಂದು ತೆರೆಕಾಣಲಿದ್ದು, ರಣ್‌ಬೀರ್‌ ಕಪೂರ್‌ ಪತ್ನಿ ಆಲಿಯಾ ಭಟ್‌ ಹಾಗೂ ವಿಕ್ಕಿ ಕೌಶಲ್‌ ತಾರಾಬಳಗದಲ್ಲಿದ್ದಾರೆ.

ADVERTISEMENT

ಸಂಜಯ್‌ ಲೀಲಾ ಬನ್ಸಾಲಿ ಜೊತೆ ವಿಕ್ಕಿ ಕೌಶಲ್‌ ಮೊದಲ ಸಿನಿಮಾ ಇದಾಗಿದೆ. 2022ರಲ್ಲಿ ತೆರೆಕಂಡಿದ್ದ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ಯಲ್ಲಿ ಆಲಿಯಾ ಭಟ್‌ ನಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.