ADVERTISEMENT

ಬಾಲಿವುಡ್ ಹಿರಿಯ ನಿರ್ದೇಶಕನ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2026, 5:45 IST
Last Updated 20 ಫೆಬ್ರುವರಿ 2026, 5:45 IST
   

ಮುಂಬೈ: ಬಾಲಿವುಡ್ ನಿರ್ದೇಶಕ, ನಿರ್ಮಾಪಕ  ಎಂ.ಎಂ. ಬೇಗ್ (70)  ಅವರು  ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ. 

ಎಂ.ಎಂ. ಬೇಗ್ ಅವರು ಹಲವು ವರ್ಷಗಳಿಂದ ಮನೆಯಲ್ಲಿ ಒಬ್ಬರೇ ವಾಸಿಸುತ್ತಿದ್ದರು. ಇವರು ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳುತ್ತಿದ್ದರು.

ಬೇಗ್ ಅವರು ನಾಲ್ಕೈದು ದಿನದಿಂದ ಮನೆಯಿಂದ ಹೊರಗೆ ಬಂದಿರಲಿಲ್ಲ.  ಇದನ್ನು ಗಮನಿಸಿದ ಅವರ ನೆರೆಹೊರೆಯವರು ಅವರ ಮನೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಪೋಲಿಸರಿಗೆ ಮಾಹಿತಿ ನೀಡಿದ್ದರು.

ADVERTISEMENT

ವಿಷಯ ತಿಳಿದ ಪೊಲೀಸರು ಬಾಗಿಲು ತೆರೆದು ನೋಡಿದ್ದಾರೆ. ಎಂ.ಎಂ. ಬೇಗ್ ಅವರ ದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆ ಕೂಡಲೇ ಅಧಿಕಾರಿಗಳು ಅವರ ಪುತ್ರಿಗೆ ಮಾಹಿತಿ ವಿಷಯ ತಿಳಿಸಿದ್ದಾರೆ.

ಬೇಗ್ ಅವರು ಒಂ ಪ್ರಕಾಶ್, ವಿಮಲ್ ಕುಮಾರ್, ರಾಕೇಶ್ ರೋಶನ್ ಅವರ ಸಹಾಯಕ ನಿರ್ದೇಕನಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಬಳಿಕ ಅವರು ‘ಆದ್ಮಿ ಖಿಲೋನಾ ಹೈ’, ‘ಕಾಲ ಬಝಾರ್‘,  ಸೇರಿ ಅನೇಕ ಚಿತ್ರಗಳಲ್ಲಿ  ಕಾರ್ಯನಿರ್ವಹಿಸಿದ್ದಾರೆ.