
ಶೂಟಿಂಗ್‌ಗಾಗಿ ಕಾಶ್ಮೀರದತ್ತ ಮತ್ತೆ ಬಾಲಿವುಡ್ ಮಂದಿ: ನಟ ಸುನಿಲ್ ಶೆಟ್ಟಿ ವಿಶ್ವಾಸ
ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಸಿನಿಮಾ ಶೂಟಿಂಗ್‌ಗಾಗಿ ಬಾಲಿವುಡ್ ಮತ್ತೆ ಹೆಜ್ಜೆ ಹಾಕುತ್ತಿದೆ ಎಂದು ನಟ ಸುನಿಲ್ ಶೆಟ್ಟಿ ಹೇಳಿದ್ದಾರೆ.
ಬಿಎಸ್‌ಎಫ್ ಮ್ಯಾರಾಥಾನ್ ಮುಕ್ತಾಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಪಹಲ್ಗಾಮ್ ದಾಳಿ ಬಳಿಕ ಇತ್ತ ಕಡೆ ಬರಲು ಸಿನಿಮಾ ಮಂದಿ ಹೆದರಿದ್ದರು. ಈಗ ಆ ಕಾರ್ಮೋಡಗಳು ಕರಗಿ ಮತ್ತೆ ನಮ್ಮ ಸ್ನೇಹಿತರು ಶೂಟಿಂಗ್‌ಗಾಗಿ ಜಮ್ಮು ಕಾಶ್ಮೀರದತ್ತ ನೋಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಕಳೆದ ಹೋಗಿದ್ದ ನಮ್ಮ ಕಾಶ್ಮೀರ ಕಣಿವೆಯ ವೈಭವ ಮತ್ತೆ ಮೂಡಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
1997 ರ ಜೆಪಿ ದತ್ತಾ ಅವರ ಬಾರ್ಡರ್ ಸಿನಿಮಾದಲ್ಲಿ ಸುನಿಲ್ ಶೆಟ್ಟಿ ಅವರು ಭೈರವ್ ಸಿಂಗ್ ಪಾತ್ರದಲ್ಲಿ ನಟಿಸಿದ್ದರು. ಅವರ ಸ್ಮರಣಾರ್ಥ ಬಿಎಸ್‌ಎಫ್ ಕಾರ್ಯಕ್ರಮದಲ್ಲಿ ಶೆಟ್ಟಿ ಅವರಿಗೆ ಆಮಂತ್ರಣವಿತ್ತು.
ಸೈನಿಕರಷ್ಟೇ ಅಲ್ಲದೇ ದೇಶದ ಯುವಕ–ಯುವತಿಯರು, ಪ್ರತಿಯೊಬ್ಬರೂ ಫಿಟ್‌ನೆಸ್ ಕಾಪಾಡಿಕೊಳ್ಳಬೇಕು ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.