ADVERTISEMENT

ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್ ವೇಳೆ ಅಪಘಾತ: ಖ್ಯಾತ ಗಾಯಕ ಜುಬಿನ್ ಗರ್ಗ್‌ ಸಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2025, 11:05 IST
Last Updated 19 ಸೆಪ್ಟೆಂಬರ್ 2025, 11:05 IST
<div class="paragraphs"><p>ಜುಬಿನ್ ಗರ್ಗ್‌</p></div>

ಜುಬಿನ್ ಗರ್ಗ್‌

   

ಗುವಾಹಟಿ: ಸಿಂಗಪುರದಲ್ಲಿ ಸ್ಕೂಬಾ ಡೈವಿಂಗ್‌ ವೇಳೆ ಅಪಘಾತ ಸಂಭವಿಸಿ ಅಸ್ಸಾಂ ಮೂಲದ ಬಾಲಿವುಡ್‌ ಗಾಯಕ ಜುಬಿನ್ ಗರ್ಗ್‌ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. 

52 ವರ್ಷದ ಅಸ್ಸಾಂ ಗಾಯಕ ಜುಬಿನ್ ‘ಈಶಾನ್ಯ ಭಾರತ ಹಬ್ಬ’ಕ್ಕೆ ತೆರಳಿದ್ದರು. ಸೆ.20,21ರಂದು ಅವರು ಪ್ರದರ್ಶನ ನೀಡಬೇಕಿತ್ತು.

ADVERTISEMENT

ಜುಬಿನ್‌ ಸ್ಕೂಬಾ ಡೈವಿಂಗ್‌ ವೇಳೆ ಅಪಘಾತಕ್ಕೀಡಾಗಿದ್ದಾರೆ. ಸಮುದ್ರದಿಂದ ಹೊರಕರೆತಂದು ಸಿಪಿಆರ್‌ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಸಿಂಗಪುರ ಜನರಲ್‌ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಕಾರ್ಯಕ್ರಮದ ಪ್ರತಿನಿಧಿಯೊಬ್ಬರು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. 

ಜುಬಿನ್ ಸಾವಿನ ಕುರಿತು ಸಂತಾಪ ವ್ಯಕ್ತಪಡಿಸಿರುವ ಅಸ್ಸಾಂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅಶೋಕ್ ಸಂಘಲ್‌, ‘ನಮ್ಮ ಪ್ರೀತಿಯ ಜುಬಿನ್ ಗರ್ಗ್‌ ಸಾವು ಅತೀವ ದುಃಖ ತಂದಿದೆ. ಅಸ್ಸಾಂ ಕೇವಲ ಧ್ವನಿಯನ್ನು ಕಳೆದುಕೊಂಡಿಲ್ಲ, ಹೃದಯಬಡಿತವನ್ನು ಕಳೆದುಕೊಂಡಿದೆ. ಜುಬಿನ್ ಕೇವಲ ಗಾಯಕರಲ್ಲ ಅಸ್ಸಾಂ ಮತ್ತು ದೇಶದ ಹೆಮ್ಮೆ’ ಎಂದು ಬರೆದುಕೊಂಡಿದ್ದಾರೆ.

ಜುಬಿನ್‌, ಬಾಲಿವುಡ್‌ನ ಗ್ಯಾಂಗ್‌ಸ್ಟರ್‌ ಚಿತ್ರದ ‘ಯಾ ಅಲಿ’, ಕ್ರಿಶ್‌ 3 ಚಿತ್ರದ ‘ದಿಲ್‌ ತು ಹೈ ಪತಾ’ ಹಾಗೂ ಅಸ್ಸಾಂ, ಬೆಂಗಾಳಿ ಚಲನಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.