ADVERTISEMENT

Brat Movie: ಡಾರ್ಲಿಂಗ್‌ ಕೃಷ್ಣ ಅಭಿನಯದ ‘ಬ್ರ್ಯಾಟ್’  ಚಿತ್ರದ ಟ್ರೇಲರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 22:30 IST
Last Updated 18 ಅಕ್ಟೋಬರ್ 2025, 22:30 IST
<div class="paragraphs"></div><div class="paragraphs"><p><strong>ಡಾರ್ಲಿಂಗ್ ಕೃಷ್ಣ,&nbsp; ಮನೀಶಾ</strong></p></div>

ಡಾರ್ಲಿಂಗ್ ಕೃಷ್ಣ,  ಮನೀಶಾ

   

ಡಾರ್ಲಿಂಗ್‌ ಕೃಷ್ಣ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ‘ಬ್ರ್ಯಾಟ್‌’ ಚಿತ್ರದ ಟ್ರೇಲರ್‌ ಅನ್ನು ಕಿಚ್ಚ ಸುದೀಪ್‌ ಅನಾವರಣ ಮಾಡಿದರು. 

ಶಶಾಂಕ್ ಒಳ್ಳೆಯ ಕಥೆಗಾರ. ಅವರ ನಿರ್ದೇಶನದ ಚಿತ್ರ ಎಂದ ಮೇಲೆ ಚೆನ್ನಾಗಿರುತ್ತದೆ. ಹಾಗೆ ಡಾರ್ಲಿಂಗ್ ಕೃಷ್ಣ ಕೂಡ ಉತ್ತಮ ನಟ. ಇವರಿಬ್ಬರ ಕಾಂಬಿನೇಶನ್‌ನಲ್ಲಿ ಮೂಡಿಬಂದಿದ್ದ ‘ಕೌಸಲ್ಯ ಸುಪ್ರಜ ರಾಮ’ ಚಿತ್ರ ಕೂಡ ಬಿಗ್ ಹಿಟ್ ಆಗಿತ್ತು. ಈ ಚಿತ್ರ ಕೂಡ ಸೂಪರ್ ಹಿಟ್ ಆಗಲಿ ಎಂದು ಸುದೀಪ್ ಹಾರೈಸಿದರು.

ADVERTISEMENT

‘ಕೌಸಲ್ಯ ಸುಪ್ರಜ ರಾಮ’ದಂತೆ ಬ್ರ್ಯಾಟ್‌ ಚಿತ್ರದ ಟ್ರೇಲರ್‌ ಅನ್ನು ಸುದೀಪ್‌ ಅವರೇ ಬಿಡುಗಡೆ ಮಾಡಿದ್ದಾರೆ. ಇದು ಕೂಡ ದೊಡ್ಡ ಹಿಟ್ ಆಗುವ ನಂಬಿಕೆ ಇದೆ. ಈ ಚಿತ್ರವನ್ನು ಪ್ಯಾನ್‌ ಇಂಡಿಯಾ ಚಿತ್ರವೆಂದು ನಿರ್ಮಾಣ ಮಾಡಲಾಗಿದ್ದು, ಈವರೆಗೆ ಟೀಸರ್‌ ಹಾಗೂ ಹಾಡುಗಳನ್ನು ಎಲ್ಲಾ ಭಾಷೆಗಳಲ್ಲಿಯೂ ಬಿಡುಗಡೆ ಮಾಡಿಕೊಂಡು ಬರಲಾಗಿದೆ. ಸದ್ಯಕ್ಕೆ ಟ್ರೇಲರ್‌ ಕನ್ನಡದಲ್ಲಿ ಮಾತ್ರ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಭಾಷೆಗಳಲ್ಲಿಯೂ ಟ್ರೇಲರ್‌ ಅನಾವರಣಗೊಳ್ಳಲಿದೆ ಎಂದರು ನಿರ್ದೇಶಕ ಶಶಾಂಕ್.

ಡಾಲ್ಫಿನ್ ಎಂಟರ್‌ಟೈನ್‌ಮೆಂಟ್‌ ಲಾಂಛನದಲ್ಲಿ ಮಂಜುನಾಥ್ ಕಂದಕೂರ್ ನಿರ್ಮಿಸಿರುವ, ಶಶಾಂಕ್ ನಿರ್ದೇಶನವಿದೆ.

ಡಾರ್ಲಿಂಗ್ ಕೃಷ್ಣ ಮಾತನಾಡಿ, ‘ ಶಶಾಂಕ್‌ ನನಗೆ ನಾಲ್ಕೈದು ಕಥೆಗಳನ್ನು ಹೇಳಿದರು. ಅದರಲ್ಲಿ ನನಗೆ ಈ ಕಥೆ ಹಿಡಿಸಿತು. ಅರ್ಜುನ್ ಜನ್ಯ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಹಾಡುಗಳು ಹಾಗೂ ಚಿತ್ರದ ಟೀಸರ್ ನಿರೀಕ್ಷೆಗೂ ಮೀರಿ ಜನರನ್ನು ತಲುಪಿದೆ. ಈ ಚಿತ್ರದ ನನ್ನ ಲುಕ್ ಕೂಡ ಅಭಿಮಾನಿಗಳಿಗೆ ಇಷ್ಟವಾಗಿದೆ. ಇದೇ ಅ.31ಕ್ಕೆ ನಮ್ಮ ಚಿತ್ರ ತೆರೆಗೆ ಬರುತ್ತಿದೆ. ಪ್ರೋತ್ಸಾಹಿಸಿ’ ಎಂದು ಕೋರಿದರು.

ನಾಯಕಿ ಮನಿಶಾ ಕಂದಕೂರ್ ,  ರಮೇಶ್ ಇಂದಿರಾ, ಡ್ರ್ಯಾಗನ್ ಮಂಜು, ಆನಂದ್ ಆಡಿಯೊ ಸಂಸ್ಥೆಯ ಆನಂದ್, ಗಾಯಕ ಬಾಳು ಬೆಳಗುಂದಿ, ಗಾಯಕಿ ಲಹರಿ, ನಿರ್ಮಾಪಕರ ಸಹೋದರ ಬದರಿನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.