ಆಶಿಶ್ ಶೆಲಾರ್
(ಚಿತ್ರ ಕೃಪೆ–@ShelarAshish)
ಮುಂಬೈ: ಮುಂದಿನ ತಿಂಗಳು ಫ್ರಾನ್ಸ್‌ನಲ್ಲಿ ನಡೆಯಲಿರುವ ಕಾನ್ ಚಲನಚಿತ್ರೋತ್ಸವಕ್ಕೆ ನಾಲ್ಕು ಮರಾಠಿ ಚಿತ್ರಗಳು ಆಯ್ಕೆಯಾಗಿವೆ ಎಂದು ಮಹಾರಾಷ್ಟ್ರ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಆಶಿಶ್ ಶೆಲಾರ್ ಭಾನುವಾರ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾರಾಷ್ಟ್ರ ಚಲನಚಿತ್ರ, ರಂಗಭೂಮಿ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ನಿಗಮವು ನೇಮಿಸಿದ ತಜ್ಞರ ಸಮಿತಿಯು ಚಿತ್ರಗಳನ್ನು ಅನುಮೋದಿಸಿದೆ ಎಂದು ಹೇಳಿದ್ದಾರೆ.
'ಸ್ಥಳ್', 'ಸ್ನೋ ಫ್ಲವರ್', 'ಖಾಲಿದ್ ಕಾ ಶಿವಾಜಿ' ಮತ್ತು 'ಜುನಾ ಫರ್ನಿಚರ್' ಚಲನಚಿತ್ರಗಳು ಅಧಿಕೃತವಾಗಿ ಆಯ್ಕೆಯಾಗಿವೆ ಎಂದು ಅವರು ಹೇಳಿದ್ದಾರೆ.
ಮೇ 14 ರಿಂದ 22ರವರೆಗೆ ಕಾನ್ ಚಲನಚಿತ್ರೋತ್ಸವ ನಡೆಯಲಿದೆ. ಮರಾಠಿ ಚಲನಚಿತ್ರಗಳನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು ಮತ್ತು ಜಾಗತಿಕ ಚಲನಚಿತ್ರ ಪ್ರೇಮಿಗಳಿಗೆ ಮರಾಠಿ ಸಿನಿಮಾಗಳ ಬಗ್ಗೆ ಒಲವು ಮೂಡುವಂತೆ ಸರ್ಕಾರದ ಉದ್ದೇಶ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.