ADVERTISEMENT

ಬಂಧಿತ ಸಹೋದರನ ನೆನೆದು ಭಾವುಕ ಪೋಸ್ಟ್ ಹಂಚಿಕೊಂಡ ನಟಿ ಸೆಲಿನಾ ಜೇಟ್ಲಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2025, 6:26 IST
Last Updated 10 ನವೆಂಬರ್ 2025, 6:26 IST
   

ಮುಂಬೈ: ಯುಎಇನಲ್ಲಿ ಬಂಧನದಲ್ಲಿರುವ ಸಹೋದರ ಮೇಜರ್(ನಿವೃತ್ತ) ವಿಕ್ರಾಂತ್ ಕುಮಾರ್ ಜೇಟ್ಲಿ ಅವರನ್ನು ನೆನೆದು ನಟಿ ಸೆಲಿನಾ ಜೇಟ್ಲಿ ಅವರು ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ಭದ್ರತೆ ಸಂಬಂಧಿಸಿದ ಪ್ರಕರಣದಲ್ಲಿ ವಿಕ್ರಾಂತ್ ಅವರನ್ನು ಯುಎಇ ಅಧಿಕಾರಿಗಳು ಬಂಧಿಸಿದ್ದರು. ಕಳೆದ 14 ತಿಂಗಳಿನಿಂದ ಅವರು ಜೈಲಿನಲ್ಲಿದ್ದಾರೆ.

ವಿಕ್ರಾಂತ್ ಜೇಟ್ಲಿ ಅವರ ಸ್ಥಿತಿಗತಿಯ ಬಗ್ಗೆ ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ದೆಹಲಿ ಹೈಕೋರ್ಟ್ ಇತ್ತೀಚೆಗೆ ಕೇಂದ್ರಕ್ಕೆ ನಿರ್ದೇಶನ ನೀಡಿತ್ತು. ಇದಾದ ಬೆನ್ನಲ್ಲೇ ಸಹೋದರನ ಕುರಿತು ಸೆಲಿನಾ ಅವರು ಭಾವನಾತ್ಮಕ ಬರೆದುಕೊಂಡಿದ್ದಾರೆ.

ADVERTISEMENT

‘ನನ್ನ ಪ್ರೀತಿಯ ಸಹೋದರ... ನೀನು ಅಲ್ಲಿ ಚೆನ್ನಾಗಿದ್ದೀಯಾ ಎಂದು ನಾನು ಭಾವಿಸುತ್ತೇನೆ. ನಾನು ನಿನ್ನ ಜೊತೆ ಬಂಡೆಯಂತೆ ನಿಂತಿದ್ದೇನೆ. ನಿನ್ನ ನೆನೆದು ಅಳದೇ ಒಂದು ರಾತ್ರಿಯೂ ನಿದ್ದೆ ಮಾಡಿಲ್ಲ. ನಿನಗಾಗಿ ನಾನು ಎಲ್ಲವನ್ನು ತ್ಯಜಿಸಬಲ್ಲೆ....ದೇವರು ದಯೆ ತೋರುತ್ತಾನೆ ಎಂದು ನಾನು ನಂಬಿದ್ದೇನೆ.... ಇಲ್ಲಿ ನಿನಗಾಗಿ ಕಾಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಸೆಲಿನಾ ಅವರು ತಮ್ಮ ಸಹೋದರನಿಗೆ ಕಾನೂನು ಮತ್ತು ವೈದ್ಯಕೀಯ ನೆರವು ನೀಡುವಂತೆ ಕೋರಿ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದರು.

ಸೆಲಿನಾ ಅವರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು, ಯುಎಇ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಲು ನೋಡಲ್ ಅಧಿಕಾರಿಯನ್ನು ನೇಮಕಗೊಳಿಸುವಂತೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.