ADVERTISEMENT

ಬಾಲ್ಯದ ನೆನಪುಗಳನ್ನು ಮರುಕಳಿಸುವ ‘ಚೆಲ್ಲೋ ಶೋ’

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2022, 9:38 IST
Last Updated 14 ಅಕ್ಟೋಬರ್ 2022, 9:38 IST
ಚೆಲ್ಲೋ ಶೋ ಚಿತ್ರದ ಪೋಸ್ಟರ್‌
ಚೆಲ್ಲೋ ಶೋ ಚಿತ್ರದ ಪೋಸ್ಟರ್‌   

ಭಾರತದಿಂದ ಆಸ್ಕರ್‌ಗೆ ಆಯ್ಕೆಯಾಗಿರುವ ಏಕೈಕ ಚಿತ್ರ ‘ಚೆಲ್ಲೋ ಶೋ’ ಇಂದು ತೆರೆ ಕಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಗುಜರಾತ್‌ನ ಹಸಿರಾದ ಒಂದು ಹಳ್ಳಿಯಲ್ಲಿ ನಡೆಯುವ ಕಥೆ. ಚಿತ್ರದ ನಾಯಕ ಬಾಲನಟ ಸಮಯ್‌ ಸಿನಿಮಾದ ಕನಸು ಕಾಣುವ ಹುಡುಗ. ಚಹಾ ಮಾರಾಟಗಾರನ ಮಗನಾಗಿ, ಮಧ್ಯಮ ವರ್ಗದವನಾಗಿ ಸುತ್ತಲಿನ ಸಂಗತಿಗಳು ಆತನ ಕನಸಿಗೆ ಪೂರಕವಾಗಿರುವುದಿಲ್ಲ. ಬಾಲಕ ಹೇಗೆ ಸಿನಿಮಾವನ್ನು ಅರಸಿಕೊಂಡು ಹೋಗುತ್ತಾನೆಂಬುದೇ ಕಥೆ.

ಜಾತಿ ವ್ಯವಸ್ಥೆ, ಆರ್ಥಿಕವಾಗಿ ಸ್ಥಿರತೆ ನೀಡದ ಚಹಾ ಅಂಗಡಿ ಇವೆಲ್ಲದರ ನಡುವೆ ಸಮಯ್‌ನ ಸಿನಿಮಾ ಕನಸು, ಅದರತ್ತ ಒಂದು ಸುಂದರ ಪಯಣವನ್ನು ಈ ಸಿನಿಮಾ ಕಟ್ಟಿಕೊಡುತ್ತದೆ.

ADVERTISEMENT

ಹತ್ತಿರದ ನಗರದ ಫಾಜಲ್‌ ಎಂಬ ಚಿತ್ರಮಂದಿರದವನ ಜೊತೆ ಸ್ನೇಹ ಬೆಳೆಸಿಕೊಂಡ ಸಮಯ್‌, ಸಿಂಗಲ್‌ ಸ್ಕ್ರೀನ್‌ನಲ್ಲಿ ಸಿನಿಮಾ ನೋಡಲು ಶುರುವಿಡುತ್ತಾನೆ. ಮುಳುಗುತ್ತಿರುವ ಸಿಂಗಲ್‌ ಸ್ಕ್ರೀನ್‌ ಸಂಸ್ಕೃತಿಯತ್ತ ಸಿನಿಮಾ ದೃಷ್ಟಿ ಹಾಯಿಸುತ್ತದೆ. ಸಿನಿಮಾದ ಸುತ್ತಲೇ ಸಾಗುವ ಕಥೆ ಸಾಕಷ್ಟು ಭಾವನೆಗಳೊಂದಿಗೆ, ಬಾಲ್ಯದ ನೆನಪುಗಳೊಂದಿಗೆ ಪ್ರೇಕ್ಷಕನನ್ನು ಹಿಡಿದಿಡುತ್ತದೆ. ಪಾನ್‌ ನಳೀನ್‌ ನಿರ್ದೇಶನದ ಚಿತ್ರ ದೇಶದ 95 ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.