ADVERTISEMENT

`ಕಾಂಟ್ರಾಕ್ಟ್’ ಚಿತ್ರದ ಟೀಸರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 19:30 IST
Last Updated 28 ಮಾರ್ಚ್ 2019, 19:30 IST
ಅರ್ಜುನ್‌ ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ
ಅರ್ಜುನ್‌ ಸರ್ಜಾ ಮತ್ತು ರಾಧಿಕಾ ಕುಮಾರಸ್ವಾಮಿ   

ಸಂಜಯ್‌ ಗೊಡಾವತ್ ಅರ್ಪಿಸುವ ಸಮೀರ್‌ ಪ್ರೊಡಕ್ಷನ್ಸ್ ಲಾಂಛನದಡಿ ಸಮೀರ್‌ ನಿರ್ಮಿಸಿರುವ ‘ಕಾಂಟ್ರಾಕ್ಟ್ಶ್’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು.

ಅರ್ಜುನ್ ಸರ್ಜಾ, ರಾಧಿಕಾ ಕುಮಾರಸ್ವಾಮಿ ಹಾಗೂ ಕೆ. ವಿಶ್ವನಾಥ್‌ ಟೀಸರ್ ಬಿಡುಗಡೆ ಮಾಡಿದ್ದಾರೆ. ಚಿತ್ರ ಏಪ್ರಿಲ್ ಕೊನೆಗೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.ಸಮೀರ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಅಮೀರ್ ಲಾಲ್ ಅವರ ಛಾಯಾಗ್ರಹಣವಿದೆ. ಸುಭಾಷ್ ಆನಂದ್ ಸಂಗೀತ ನಿರ್ದೇಶನವಿದೆ. ಕಿಕ್ ಆಸ್ ಸಾಹಸ ನಿರ್ದೇಶನ ನೀಡಿದ್ದಾರೆ. ಪ್ರಭು ಅವರ ಸಂಕಲನ ಹಾಗೂ ಅಮ್ಮ ರಾಜಶೇಖರ್ ಅವರ ನೃತ್ಯ ನಿರ್ದೇಶನವಿದೆ. ರಘು ಕುಲಕರ್ಣಿ ಅವರ ಕಲಾ ನಿರ್ದೇಶನವಿದೆ.

ಅರ್ಜುನ್ ಸರ್ಜಾ ನಾಯಕರಾಗಿ ನಟಿಸಿದ್ದಾರೆ. ರಾಧಿಕಾ ಕುಮಾರಸ್ವಾಮಿ, ಜೆ.ಡಿ. ಚಕ್ರವರ್ತಿ, ಅಮೀರ್ ಖಾನ್ ಸಹೋದರ್ ಸಸಲ್ ಖಾನ್, ಕೆ. ವಿಶ್ವನಾಥ್, ಸೋನಿ ಚರಿಸ್ಟಾ, ಇತಿ ಆಚಾರ್ಯ, ಶಿಲ್ಪಾಮೂರ್ತಿ, ದುಬೈ ರಫೀಕ್ ತಾರಾಗಣದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.