ADVERTISEMENT

ಸಿನಿಮಾ ಕೂಡಾ ‘ಕಂಟ್ರಿಮೇಡ್‌’?

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 8:52 IST
Last Updated 13 ಮಾರ್ಚ್ 2022, 8:52 IST
ನಿಶ್ಚಿತ್‌ ಕರೋಡಿ, ರಾಚೆಲ್‌ ಡೇವಿಡ್‌
ನಿಶ್ಚಿತ್‌ ಕರೋಡಿ, ರಾಚೆಲ್‌ ಡೇವಿಡ್‌   

ಬಂದೂಕು ಮೂಲದ ಕಥೆ. ಪಾತ್ರವೂ ಬಂದೂಕು... ಗನ್‌ ಮತ್ತು ಸ್ವೀಟ್‌ ನಡುವಿನ ಕಥೆಯೇ ‘ಕಂಟ್ರಿಮೇಡ್‌’.ಇತ್ತೀಚೆಗೆ ಮುಹೂರ್ತ ನೆರವೇರಿಸಿಕೊಂಡ ಈ ಚಿತ್ರದ ಶೂಟಿಂಗ್‌ ಏಪ್ರಿಲ್‌ನಲ್ಲಿ ನಡೆಯಲಿದೆ.

‘ಕೋಲ್ಕತ್ತ ಮತ್ತು ಉತ್ತರ ಕರ್ನಾಟಕ ಹೀಗೆ ಎರಡು ಹಿನ್ನೆಲೆಗಳಲ್ಲಿ ಕಥೆಯು ಸಾಗುತ್ತದೆ. ಗನ್ನಿಗೂ ಮೂಲವೆಂಬುದು ಇರುತ್ತದೆ. ಉಳಿದ ಪಾತ್ರಗಳೆಲ್ಲವು ಗನ್‌ಗಳಾಗಿರುತ್ತದೆ. ಮಾಸ್ ಗ್ಯಾಂಗ್‌ಸ್ಟರ್ ಕುರಿತ ಕಥೆಯಿದು. ಬಾಲಕನಾಗಿದ್ದಾಗ ಕೆಲವು ಕಹಿ ಘಟನೆಗಳನ್ನು ಸಹಿಸಿಕೊಳ್ಳಲಾಗದೆ ಊರು ಬಿಟ್ಟು ಕೋಲ್ಕತ್ತಸೇರಿಕೊಳ್ಳುತ್ತಾನೆ. ಗನ್ ಹುಡುಕಿಕೊಂಡು ಹೋಗುವ ಪಯಣದಲ್ಲಿ ಶೀರ್ಷಿಕೆಯನ್ನು ಏಕೆ ಇಡಲಾಗಿದೆ ಎಂಬುದನ್ನು ಕ್ಲೈಮಾಕ್ಸ್‌ನಲ್ಲಿ ಹೇಳಲಾಗಿದೆ. ಪ್ರತಿಯೊಬ್ಬನೂ ದೇಶಕ್ಕೆ ಕೊಡುಗೆ ನೀಡಬೇಕು ಎಂಬ ಸಂದೇಶವನ್ನು ಕೊಡುವ ಪ್ರಯತ್ನ ಮಾಡಲಾಗುತ್ತಿದೆ’ ಎಂದಿದೆ.

‘ಗನ್ಸ್ ಅಂಡ್ ಸ್ವೀಟ್ಸ್’ ಎಂದು ಕೋಲ್ಕತ್ತಾದಲ್ಲಿ ಮಾತು ಇದೆ. ಅಂದರೆ ಗನ್‌ಗೆ ಹೀರೊಎಂದೂ, ಸ್ವೀಟ್ಸ್‌ಗೆ ಹೀರೊಯಿನ್ ಎಂದೂ ಕರೆಯುತ್ತಾರಂತೆ. ಒಳ್ಳೆಯ ಗ್ಯಾಂಗ್‌ಸ್ಟರ್ ಆಗಿ, ಎರಡು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಿಶ್ಚಿತ್‌ ಕರೋಡಿ ನಾಯಕ. ಬೆಂಗಾಲಿ ಹುಡುಗಿಯಾಗಿ ‘ಲವ್‌ಮಾಕ್ಟೆಲ್-2’ ಖ್ಯಾತಿಯ ರಾಚೇಲ್‌ ಡೇವಿಡ್ ನಾಯಕಿ.

ADVERTISEMENT

ದಾವಣಗೆರೆಯ ರಾಘವಸೂರ್ಯ ಇದಕ್ಕೂ ಮುಂಚೆ ತೆಲುಗು ಮತ್ತು ಕನ್ನಡ ಚಿತ್ರಗಳಿಗೆ ಕೆಲಸ ಮಾಡಿದ ಅನುಭವ ಹೊಂದಿದ್ದು, ಇದರ ಪರಿಣಾಮ ಈಸಿನಿಮಾಕ್ಕೆ ರಚನೆ ಮತ್ತು ನಿರ್ದೇಶನ ಮಾಡುತ್ತಿದ್ದಾರೆ.

ಇವರೊಂದಿಗೆ ಶರತ್‌ ಲೋಹಿತಾಶ್ವ, ತಬಲಾ ನಾಣಿ ನಟಿಸುತ್ತಿದ್ದಾರೆ. ಕೋಲ್ಕತ್ತ, ರಾಯಚೂರು, ತಿಂತಿಣಿ ಹಾಗೂ ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲು ಯೋಜನೆ ರೂಪಿಸಲಾಗಿದೆ. ಐದು ಹಾಡುಗಳಿಗೆ ನಕುಲ್‌ ಅಭಯಂಕರ್ ಸಂಗೀತ, ಛಾಯಾಗ್ರಹಣ ಜಿ.ಎಸ್.ಶ್ರೇಯಸ್, ಸಂಕಲನ ದೀಪು ಎಸ್.ಕುಮಾರ್ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.